alex Certify ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹತ್ತಿಸಿದ ಭೋಜ್‌ಪುರಿ ತಾರೆ ಆಕಾಂಕ್ಷಾ ದುಬೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹತ್ತಿಸಿದ ಭೋಜ್‌ಪುರಿ ತಾರೆ ಆಕಾಂಕ್ಷಾ ದುಬೆ..!

ಭೋಜ್‌ಪುರಿ ತಾರೆ ಆಕಾಂಕ್ಷಾ ದುಬೆ ತನ್ನ ನೃತ್ಯ ಮತ್ತು ಶೈಲಿಗೆ ಹೆಸರುವಾಸಿಯಾಗಿದ್ದಾಳೆ. ಸಮರ್ ಸಿಂಗ್ ಹಾಗೂ ದುಬೆ ಜೋಡಿಯು ಸೂಪರ್ ಹಿಟ್ ಆಗಿದೆ. ಇಬ್ಬರು ಕಲಾವಿದರು ಒಟ್ಟಿಗೆ ಕಾಣಿಸಿಕೊಂಡರಂತೂ ಬಿರುಗಾಳಿ, ಸುಂಟರಗಾಳಿ ಒಟ್ಟಿಗೆ ಅಪ್ಪಳಿಸುತ್ತೆ. ಇದೀಗ ಸಮಿಯಾನಾ ಛೇಡೆ ಛೇಡ್ ಹೋ ಜಯಿ ಹಾಡು ಇಂಟರ್ನೆಟ್ ನಲ್ಲಿ ಅಪ್ಪಳಿಸಿದೆ.

ಈ ಹಾಡಿನಲ್ಲಿ ಇಬ್ಬರು ಕೂಡ ಅದ್ಭುತ ಕೆಮಿಸ್ಟ್ರಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಡಿನ ವಿಡಿಯೋವನ್ನು ಸಮರ್ ಸಿಂಗ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ.

ಹಾಡಿಗೆ ಆಕಾಂಕ್ಷಾ ಸಖತ್ ಆಗಿ ಸೊಂಟ ಬಳುಕಿಸಿದ್ದು, ಪರದೆಯ ಮೇಲೆ ಕಿಚ್ಚು ಹಚ್ಚಿದ್ದಾರೆ. ಸಮರ್ ಕೈಯಲ್ಲಿ ಗನ್ ಹಿಡಿದು ಹಾಡು, ನೃತ್ಯವನ್ನು ಎಂಜಾಯ್ ಮಾಡಿದ್ದಾರೆ. ಮ್ಯೂಸಿಕ್ ವಿಡಿಯೋದಲ್ಲಿ ಇಬ್ಬರು ನಟರು ಅದ್ಭುತವಾಗಿ ಕಾಣುತ್ತಿದ್ದಾರೆ. ಆಕಾಂಕ್ಷಾ ನೀಲಿ ಬಣ್ಣದ ಉಡುಪನ್ನು ಧರಿಸಿ, ಮಿಂಚಿದ್ದಾರೆ.

ಬುಧವಾರ ಪೋಸ್ಟ್ ಮಾಡಲಾದ ವೀಡಿಯೊ ಈಗಾಗಲೇ 10,000 ಲೈಕ್‌ಗಳೊಂದಿಗೆ 2.3 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆಕಾಂಕ್ಷಾ ಅವರ ನೃತ್ಯವು ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚಿದೆ

ಪ್ರಕಾಶ್ ಬರೂದ್ ಬರೆದಿರುವ ಸಾಹಿತ್ಯಕ್ಕೆ ಸಮರ್ ಸಿಂಗ್ ಮತ್ತು ನೇಹಾ ರಾಜ್ ಧ್ವನಿ ನೀಡಿದ್ದಾರೆ. ಸುನಿಲ್ ಬಾಬಾ ನಿರ್ದೇಶನದ ಈ ವಿಡಿಯೋಗೆ ರೌಶನ್ ಸಿಂಗ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ, ಮಸ್ಕಿ ಚವಾನಿಯಾ ಎಂಬ ಮತ್ತೊಂದು ಹಾಡನ್ನು ಸಮರ್ ಸಿಂಗ್ ಮತ್ತು ಆಕಾಂಕ್ಷಾ ದುಬೆ ಮೇಲೆ ಚಿತ್ರಿಸಲಾಗಿದೆ.

ವಿಡಿಯೋದಲ್ಲಿ ಸಮರ್ ಸ್ಟೈಲಿಶ್ ಆಗಿ ಕಂಡರೆ, ಆಕಾಂಕ್ಷಾ ಕೂಡ ಗಿಡ್ಡ ಉಡುಗೆ ಮತ್ತು ಹೈ ಹೀಲ್ಸ್‌ ಧರಿಸಿ ಡಾನ್ಸ್ ಮಾಡಿದ್ದು ಪ್ರೇಕ್ಷಕರನ್ನು ರಂಜಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...