alex Certify ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಸಿಟ್ಟು: ಕಬ್ಬಿಣದ ರಾಡ್​ ನಿಂದ ಹಲ್ಲೆ ನಡೆಸಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಸಿಟ್ಟು: ಕಬ್ಬಿಣದ ರಾಡ್​ ನಿಂದ ಹಲ್ಲೆ ನಡೆಸಿದ ಭೂಪ…!

ಶ್ವಾನಗಳು ಇದ್ದ ಮೇಲೆ ಅಲ್ಲಿ ಬೊಗಳುವ ಸದ್ದು ಕೇಳುವುದು ಸರ್ವೇ ಸಾಮಾನ್ಯ. ಆದರೆ ದೆಹಲಿಯ ಪಶ್ಚಿಮ ವಿಹಾರ್​ ಎಂಬ ಪ್ರದೇಶದಲ್ಲಿ ಪಕ್ಕದ ಮನೆ ನಾಯಿ ಬೊಗಳುತ್ತೆ ಎಂಬ ಕಾರಣಕ್ಕೆ ಸಿಟ್ಟಾದ ವ್ಯಕ್ತಿಯೊಬ್ಬ ಸಾಕು ನಾಯಿ ಹಾಗೂ ನಾಯಿಯ ಮಾಲೀಕರ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ ಘಟನೆಯೊಂದು ವರದಿಯಾಗಿದೆ.

ಶ್ವಾನ ಬೊಗಳಿದ್ದಕ್ಕೆ ಸಿಟ್ಟಿಗೆದ್ದಿದ್ದ ಈ ವ್ಯಕ್ತಿಯ ಪಕ್ಕದ ಮನೆಯ ಮೂವರ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ. ಮೊದಲು ನಾಯಿಯ ಮೇಲೆ ಹಲ್ಲೆ ನಡೆಸಿದ ಈತ ಬಳಿಕ ನಾಯಿಯ ಮಾಲೀಕರಿಗೂ ರಕ್ತ ಬರುವಂತೆ ಹೊಡೆದಿದ್ದಾನೆ. ಇದನ್ನು ತಪ್ಪಿಸಲು ಬಂದ ಕುಟುಂಬಸ್ಥರ ಮೇಲೂ ಈತ ರಾಡ್​ನಿಂದ ಹಲ್ಲೆಗೈದಿದ್ದಾನೆ.

ಕಬ್ಬಿಣದ ರಾಡ್​ನಿಂದ ವ್ಯಕ್ತಿಯು ಪಕ್ಕದ ಮನೆಯವರ ಮೇಲೆ ಹಲ್ಲೆ ನಡೆಸುತ್ತಿರುವ ಸಂಪೂರ್ಣ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

— ANI (@ANI) July 4, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...