ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ನೀವು ಸ್ಥಿರ ಠೇವಣಿ ಬಡ್ಡಿದರಗಳನ್ನು ಪಡೆಯಲು ಯೋಜಿಸುತ್ತಿದ್ದರೆ, ಈಗ PNB ವಿಶೇಷ FDಯನ್ನು ತಂದಿದೆ. ಇದರಲ್ಲಿ ನಿಮಗೆ 600 ದಿನಗಳಲ್ಲೇ ದೊಡ್ಡ ಮಟ್ಟದ ಲಾಭ ದೊರೆಯಲಿದೆ. ಈ ಬಗ್ಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ತನ್ನ ಅಧಿಕೃತ ಟ್ವೀಟ್ನಲ್ಲಿ ಮಾಹಿತಿ ನೀಡಿದೆ.
ಹೂಡಿಕೆಯ ಮೇಲೆ ನಿಮಗೆ ಉತ್ತಮ ಬಡ್ಡಿ ಸಿಕ್ಕಾಗ, ಉಳಿತಾಯವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ ಎಂದು ಬರೆದಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕ್ನ 600-ದಿನಗಳ ಯೋಜನೆಯಲ್ಲಿ ಶೇ.7.85ರಷ್ಟು ಬಡ್ಡಿ ಸಿಗಲಿದೆ. ಈ ಯೋಜನೆಯ ಲಾಭ ಪಡೆಯಲು, ನೀವು PNB One ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಲ್ಲದೆ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕವೂ ಯೋಜನೆಯನ್ನು ಸಕ್ರಿಯಗೊಳಿಸಬಹುದು.
ಯೋಜನೆಯ ವಿಶೇಷತೆ ಏನು ?
ಈ ವಿಶೇಷ ಪ್ಲಾನ್ 2022ರ ಅಕ್ಟೋಬರ್ 19ರಿಂದ್ಲೇ ಪ್ರಾರಂಭವಾಗಿದೆ.60 ರಿಂದ 80 ವರ್ಷ ವಯಸ್ಸಿನ ಹಿರಿಯ ನಾಗರಿಕರು ಇದರ ಲಾಭ ಪಡೆದುಕೊಳ್ಳಬಹುದು. 80 ವರ್ಷ ಮೇಲ್ಪಟ್ಟವರಿಗೂ ಸಹ ಅವಕಾಶವಿದೆ. ಈ ಒಟ್ಟು ಮೊತ್ತದ ಅಡಿಯಲ್ಲಿ ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತವನ್ನು ಠೇವಣಿ ಇಡಬಹುದು.