alex Certify ಪಂಜಾಬ್​ನಲ್ಲಿ ಆಪ್​​ ಜಯಭೇರಿ ಬಾರಿಸುತ್ತಿದ್ದಂತೆಯೇ ವೈರಲ್​ ಆಗಿದೆ ಈ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್​ನಲ್ಲಿ ಆಪ್​​ ಜಯಭೇರಿ ಬಾರಿಸುತ್ತಿದ್ದಂತೆಯೇ ವೈರಲ್​ ಆಗಿದೆ ಈ ವಿಡಿಯೋ….!

ಅಮ್​ ಆದ್ಮಿ ಪಕ್ಷವು ಪಂಜಾಬ್​ನಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. 117 ಸ್ಥಾನಗಳಲ್ಲಿ ಆಪ್​​ 92 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಪಂಜಾಬ್​​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಪ್​ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆಯೇ ಆಪ್​ನ ಸಿಎಂ ಅಭ್ಯರ್ಥಿ ಭಗವಂತ್​ ಮಾನ್​ರ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ವಿದ್ಯಾರ್ಥಿಯಾಗಿದ್ದ ಮಾನ್​​ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಅವರು ತಾನು ಶಾಸಕ ಅಥವಾ ಮಂತ್ರಿಯಾಗಬೇಕೆಂದು ಹೇಳಿದ್ದಾರೆ.

ಈ ವಿಡಿಯೋವನ್ನು ಐಪಿಎಸ್​ ಅಧಿಕಾರಿ ರೂಪಿನ್​ ಶರ್ಮಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಇದು ಭಗವಂತ್​ ಮಾನ್​ರ ವಿದ್ಯಾರ್ಥಿ ದಿನವಾಗಿದೆ. ಶಿಕ್ಷಕರು ನೀನು ಬೆಳೆದು ಏನಾಗಬೇಕೆಂದು ಬಯಸುತ್ತೀಯಾ ಎಂದು ಕೇಳುತ್ತಾರೆ. ಅದಕ್ಕೆ ಮಾನ್​ ಸಾಕಷ್ಟು ವಿದ್ಯಾಭ್ಯಾಸ ಮಾಡಿದರೆ ಅಧಿಕಾರಿಯಾಗುತ್ತೇನೆ . ಇಲ್ಲದೇ ಹೋದರೆ ಶಾಸಕ ಅಥವಾ ಮಂತ್ರಿಯಾಗುತ್ತೇನೆ ಎಂದು ಪಂಜಾಬಿ ಭಾಷೆಯಲ್ಲಿ ಉತ್ತರಿಸಿದ್ದಾರೆ. ಇದೀಗ ಮಾನ್​ ಸಿಎಂ ಆಗುವ ಹಾದಿಯಲ್ಲಿದ್ದು ಈ ಬೆನ್ನಲ್ಲೇ ವಿಡಿಯೋ ವೈರಲ್​ ಆಗಿದೆ.

Congratulations !? pic.twitter.com/LXRx76UxPD

— Rupin Sharma (@rupin1992) March 10, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...