alex Certify ಪಂಜಾಬಿ ಹಾಡಿಗೆ ಕುಣಿದ ವಧು-ವರ: ಮುದ್ದಾದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿ ಹಾಡಿಗೆ ಕುಣಿದ ವಧು-ವರ: ಮುದ್ದಾದ ವಿಡಿಯೋ ವೈರಲ್

Viral Video: Bride and Groom Hit The Dance Floor as DJ Plays Their Favourite Punjabi Song. Watchಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದ ವಿಡಿಯೋ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದೆ. ವಧು-ವರರು ನರ್ತಿಸುವ, ಮೋಜಿನ, ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳನ್ನು ತುಂಬಿವೆ. ಇದೀಗ ಮತ್ತೊಂದು ವಿವಾಹದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಧು ಹಾಗೂ ವರ ತಮ್ಮ ಮದುವೆಯನ್ನು ಸಂಭ್ರಮದಿಂದ ಆನಂದಿಸಿದ್ದಾರೆ. ದಂಪತಿಯು ಪೀಚ್ ಮತ್ತು ಗೋಲ್ಡನ್ ಬಣ್ಣದ ಉಡುಗೆಗಳನ್ನು ತೊಟ್ಟಿದ್ದು, ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ವಧು ಮತ್ತು ವರ ವೇದಿಕೆಯ ಕಡೆಗೆ ತೆರಳುತ್ತಿದ್ದಂತೆ, ಪಂಜಾಬಿ ಹಾಡು ಟಾಪ್ ನಾಚ್ ಗಬ್ರು ಪ್ಲೇ ಆಗಿದೆ. ಈ ವೇಳೆ ಅವರು ನೃತ್ಯ ಮಾಡುತ್ತಾ ಬಹಳ ಜೋಶ್ ನಿಂದ ತಮ್ಮ ವಿವಾಹದ ವೇದಿಕೆಗೆ ಆಗಮಿಸಿದ್ದಾರೆ.

ನಂತರ ಕ್ಯಾಮರಾಮ್ಯಾನ್ ತನ್ನ ಸುಂದರ ವಧುವನ್ನು ಚಿತ್ರೀಕರಿಸಿದಾಗ, ಆಕೆಯೂ ಹಾಡಿಗೆ ನೃತ್ಯ ಮಾಡಿದ್ದಾಳೆ. ‘ಕಾಲಿ ಗಡ್ಡಿ ಕಾಲಾ ಪಿಸ್ತೂಲ್’ ಹಾಡು ಹಾಕಲಾಗಿದ್ದು, ವಧುವು ನೃತ್ಯದ ಜೊತೆಗೆ ಆಕ್ಷನ್ ಕೂಡ ಮಾಡಿದ್ದಾಳೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಸಾವಿರಾರು ಮಂದಿ ವಿಡಿಯೋ ವೀಕ್ಷಿಸಿದ್ದು, ವಧುವಿನ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...