alex Certify ಪಂಜಾಬಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಬೀರ್ – ಆಲಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಬೀರ್ – ಆಲಿಯಾ

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್-ಆಲಿಯಾ ಭಟ್ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ನೂತನ ದಂಪತಿಗಳ ವಿವಾಹೋತ್ಸವದ ಫೋಟೋಗಳು ಇನ್ನೂ ಲೀಕ್ ಆಗಿಲ್ಲ. ಅವರ ಅಭಿಮಾನಿಗಳು ಮದುವೆಯ ಫೋಟೋ ನೋಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಮದುವೆ ಸಮಾರಂಭಕ್ಕೆ ಕೆಲವೇ ಕೆಲವು ಗಣ್ಯರಷ್ಟೇ ಹಾಜರಿದ್ದರು. ಹಾಗೂ ಆಪ್ತರಿಗಷ್ಟೇ ಕರೆಯಲಾಗಿತ್ತು.

ಇವರ ಮದುವೆ ಸಮಾರಂಭದಲ್ಲಿ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್, ಅಯಾನ್ ಮುಖರ್ಜಿ, ಆಕಾಶ್-ಶ್ಲೋಕಾ ಅಂಬಾನಿ, ಸೋನಿ ರಜ್ದಾನ್, ನೀತು ಕಪೂರ್, ಪೂಜಾ ಭಟ್, ಅರ್ಮಾನ್ ಜೈನ್-ಅನಿಶಾ ಜೈನ್, ರಿಮಾ ಜೈನ್, ನೀಲಾ ದೇವಿ ಮತ್ತು ಅನುಷ್ಕಾ ಸೇರಿದಂತೆ ದಂಪತಿಯ ಕುಟುಂಬ ಸದಸ್ಯರು ಮತ್ತು ಆಪ್ತರು ಉಪಸ್ಥಿತರಿದ್ದರು. ಬಾಲಿವುಡ್ ಚಿತ್ರತಂಡಕ್ಕಾಗಿ ವಿಶೇಷ ಆರತಕ್ಷತೆ ಕಾರ್ಯಕ್ರಮ ಯೋಜಿಸಲು ನಿರ್ಧರಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಮದುವೆಯ ಆರತಕ್ಷತೆ ತಾಜ್ ಕೊಲಾಬಾದಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ವಧು-ವರರಾಗಿ ರಣಬೀರ್ ಮತ್ತು ಆಲಿಯಾ ಅವರು ಹೇಗೆ ಕಾಣಿಸುತ್ತಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗಿದೆ. ತಮ್ಮ ಮದುವೆಯ ದಿನದಂದು ಅವರು ಬೀಜ್ ಮತ್ತು ಗೋಲ್ಡನ್ ಛಾಯೆಗಳಲ್ಲಿ ಸಬ್ಯಸಾಚಿ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ರಣಬೀರ್ ಮತ್ತು ಆಲಿಯಾ ಐದು ವರ್ಷಗಳ ಹಿಂದೆ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಬ್ರಹ್ಮಾಸ್ತ್ರ ಚಿತ್ರೀಕರಣದ ಸಮಯದಲ್ಲಿ ಅವರು ಪರಸ್ಪರ ಮತ್ತಷ್ಟು ಹತ್ತಿರವಾಗಿದ್ದರು. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರ ಇದೇ ವರ್ಷ ಸೆಪ್ಟೆಂಬರ್ 9 ರಂದು ತೆರೆಗೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...