alex Certify ಪಂಚತಾರಾ ಹೋಟೆಲ್‌ನಲ್ಲಿ ಕಚಾ ಬಾದಾಮ್ ಹಾಡಿದ ಗಾಯಕ ಭುವನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಚತಾರಾ ಹೋಟೆಲ್‌ನಲ್ಲಿ ಕಚಾ ಬಾದಾಮ್ ಹಾಡಿದ ಗಾಯಕ ಭುವನ್

ಕಚಾ ಬಾದಮ್ ಹಾಡು ಎಲ್ಲಾ ಗಡಿಗಳನ್ನು ಮೀರಿ ಪ್ರಸಿದ್ಧಿ ಪಡೆದಿದೆ. ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಈ ಹಾಡು ಹೊಸ ಸೆನ್ಸೇಷನ್ ಹುಟ್ಟುಹಾಕಿದೆ. ಸದ್ಯ, ಈ ಹಾಡಿನ ಸಾಕಷ್ಟು ರೀಲ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಗಿರಕಿ ಹೊಡೆಯುತ್ತಿವೆ. ಇದೀಗ, ಈ ಟ್ರೆಂಡಿಂಗ್ ಹಾಡಿನ ಗಾಯಕ ಭುವನ್ ಬಡ್ಯಾಕರ್ ಶುಕ್ರವಾರ ಕೋಲ್ಕತ್ತಾದ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಪ್ರದರ್ಶನ ನೀಡಿದ್ದಾರೆ.

ಬ್ಲಿಂಗಿ ಜಾಕೆಟ್, ಟೀ ಶರ್ಟ್ ಮತ್ತು ಜೀನ್ಸ್ ಧರಿಸಿರುವ ಬಡ್ಯಾಕರ್ ಅವರು ತಮ್ಮ ವೈರಲ್ ಹಿಟ್‌ ಹಾಡಿನೊಂದಿಗೆ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕಚಾ ಬಾದಾಮ್ ಹಾಡನ್ನು ಉತ್ಸಾಹದಿಂದ ಹಾಡಿದ ಗಾಯಕನಿಗೆ ಜನರು ಜೈಕಾರ ಕೂಗಿದ್ದಾರೆ.

ಕಡಲೆಕಾಯಿ ಮಾರಾಟ ಮಾಡುತ್ತಿದ್ದ ಭುವನ್ ಬಡ್ಯಾಕರ್ ಈ ಹಾಡನ್ನು ರಚಿಸಿ ಹಾಡಿದ್ದಾರೆ. ತಮ್ಮ ಈ ಹಾಡು ಇಷ್ಟೊಂದು ಜನಪ್ರಿಯತೆ ತಂದುಕೊಡುತ್ತದೆ ಎಂದು ಬಹುಶಃ ಅವರು ಕನಸು ನನಸಿನಲ್ಲೂ ಅಂದುಕೊಂಡಿರಲ್ಲ. ಈ ವಿಡಿಯೋ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಂತರ ಬಂಗಾಳಿ ರಾಪರ್‌ಗಳು ಬಡ್ಯಾಕರ್‌ ಅವರೊಂದಿಗೆ ಸೇರಿ ಹಾಡಿದ್ದು, ಈ ಹಾಡು ಯೂಟ್ಯೂಬ್‌ನಲ್ಲಿ 70 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇತ್ತೀಚೆಗೆ, ಈ ಹಾಡು ಹರಿಯಾಣದ ಪ್ರಸಿದ್ಧ ಗಾಯಕ-ನಟ ಅಮಿತ್ ಧುಲ್ ಅವರಿಂದ ಹರಿಯಾಣವಿ ರೀಮಿಕ್ಸ್ ಅನ್ನು ಪಡೆದುಕೊಂಡಿದೆ. ಜೊತೆಗೆ ಜನಪ್ರಿಯ ಟಿಕ್‌ಟಾಕ್ ತಾರೆ ನಿಶಾ ಭಟ್ ನೃತ್ಯ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...