alex Certify ನ.11 ರಿಂದ ಚೆನ್ನೈ-ಬೆಂಗಳೂರು-ಮೈಸೂರು ಮಧ್ಯೆ ಸಂಚರಿಸಲಿದೆ ʼವಂದೇ ಭಾರತ್‌ʼ ರೈಲು; ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ.11 ರಿಂದ ಚೆನ್ನೈ-ಬೆಂಗಳೂರು-ಮೈಸೂರು ಮಧ್ಯೆ ಸಂಚರಿಸಲಿದೆ ʼವಂದೇ ಭಾರತ್‌ʼ ರೈಲು; ಇಲ್ಲಿದೆ ಸಂಪೂರ್ಣ ವಿವರ

ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿಗೆ ಚಾಲನೆ ನೀಡಲಿದ್ದಾರೆ. ಇದು ದೇಶದ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್. ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಓಡಲಿದೆ. ನವೆಂಬರ್ 5 ರಂದು  ಈ ಸೆಮಿ ಹೈ ಸ್ಪೀಡ್ ರೈಲು ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಿಂದ ಪ್ರಯೋಗಿಕ ಸಂಚಾರ ನಡೆಸಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್, ಭಾರತದ ಮೊದಲ ಅರೆ ವೇಗದ ರೈಲು. ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ತ್ವರಿತವಾದ ವೇಗವರ್ಧನೆಯಿಂದಾಗಿ ಪ್ರಯಾಣದ ಸಮಯವನ್ನು ಶೇ.25 ರಿಂದ 45 ರಷ್ಟು ಕಡಿಮೆ ಮಾಡುತ್ತದೆ. ರೈಲು 0-100 ಕಿಮೀ ವೇಗವನ್ನು 52 ಸೆಕೆಂಡುಗಳಲ್ಲಿ ತಲುಪುತ್ತದೆ. ಎಲ್ಲಾ ವಂದೇ ಭಾರತ್ ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿವೆ.

GPS ಆಧಾರಿತ ಆಡಿಯೋ-ದೃಶ್ಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ಹಾಟ್‌ಸ್ಪಾಟ್ Wi-Fi ಮತ್ತು ಅತ್ಯಂತ ಆರಾಮದಾಯಕ ಆಸನ ಈ ರೈಲಿನ  ವಿಶೇಷತೆ. ಕಾರ್ಯನಿರ್ವಾಹಕ ವರ್ಗವು ತಿರುಗುವ ಕುರ್ಚಿಗಳನ್ನು ಸಹ ಹೊಂದಿದ್ದಾರೆ.ರೈಲಿನಲ್ಲಿರುವ ಶೌಚಾಲಯಗಳು ಜೈವಿಕ ನಿರ್ವಾತ ಮಾದರಿಯವು. ದಿವ್ಯಾಂಗ್ ಸ್ನೇಹಿ ವಾಶ್ ರೂಂಗಳು ಮತ್ತು ಬ್ರೈಲ್ ಅಕ್ಷರಗಳಲ್ಲಿ ಸೀಟ್ ಸಂಖ್ಯೆಗಳೊಂದಿಗೆ ಸೀಟ್ ಹ್ಯಾಂಡಲ್ ಅನ್ನು ಸಹ ರೈಲಿನಲ್ಲಿ ಒದಗಿಸಲಾಗಿದೆ. ಪ್ರತಿ ಕೋಚ್‌ನಲ್ಲಿ ಬಿಸಿ ಊಟ, ಬಿಸಿ ಮತ್ತು ತಂಪು ಪಾನೀಯಗಳನ್ನು ಪೂರೈಸಲು ಪ್ಯಾಂಟ್ರಿ ಇದೆ.

1.20607 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಜಂಕ್ಷನ್ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಕೇವಲ 1 ನಿಲುಗಡೆಯನ್ನು ಹೊಂದಿರುತ್ತದೆ.

2.ಇದು ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5:50ಕ್ಕೆ ಹೊರಟು ಬೆಳಗ್ಗೆ 10:25ಕ್ಕೆ ಬೆಂಗಳೂರು ಸಿಟಿ ಜಂಕ್ಷನ್‌ಗೆ ತಲುಪಲಿದೆ.ಬೆಂಗಳೂರಿನಿಂದ ಬೆಳಗ್ಗೆ 10:30ಕ್ಕೆ ಹೊರಟು ಮಧ್ಯಾಹ್ನ 12:30ಕ್ಕೆ ಅಂತಿಮ ತಾಣವಾದ ಮೈಸೂರನ್ನು ತಲುಪಲಿದೆ.

3.ಈ ರೈಲು ಸುಮಾರು 497 ಕಿ.ಮೀ ದೂರವನ್ನು 6 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ.

4.ವಂದೇ ಭಾರತ್ ಎಕ್ಸ್‌ಪ್ರೆಸ್ ಭಾನುವಾರ, ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ವಾರದಲ್ಲಿ ಆರು ದಿನ ಚಲಿಸುತ್ತದೆ.

5.ಹಿಂದಿರುಗುವ ಪ್ರಯಾಣದಲ್ಲಿ ಮೈಸೂರು ಜಂಕ್ಷನ್‌ನಿಂದ ಮಧ್ಯಾಹ್ನ 1:05 ಕ್ಕೆ ಹೊರಟು 2:55 ಕ್ಕೆ ಬೆಂಗಳೂರು ಸಿಟಿ ಜಂಕ್ಷನ್‌ಗೆ ತಲುಪಲಿದೆ.

6.ರೈಲು ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 7:35 ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ.

7.ರೈಲು 16 ಬೋಗಿಗಳನ್ನು ಹೊಂದಿರುತ್ತದೆ.

8.ರೈಲು ಇನ್ನೂ ಪ್ರಾರಂಭವಾಗದ ಕಾರಣ, ವೇಳಾಪಟ್ಟಿಯಲ್ಲಿ ಬದಲಾವಣೆಗಳ ಸಾಧ್ಯತೆಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...