alex Certify ನ್ಯೂಯಾರ್ಕ್ ಬೀದಿಯಲ್ಲಿ ಬಾಲಿವುಡ್ ಹಾಡಿಗೆ ಯುವತಿಯರ ಬೊಂಬಾಟ್ ಸ್ಟೆಪ್ಸ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್ ಬೀದಿಯಲ್ಲಿ ಬಾಲಿವುಡ್ ಹಾಡಿಗೆ ಯುವತಿಯರ ಬೊಂಬಾಟ್ ಸ್ಟೆಪ್ಸ್…..!

ಇತ್ತೀಚೆಗೆ ಇನ್ಸ್ಟಾಗ್ರಾಂ ತುಂಬೆಲ್ಲಾ ಹಾಡು, ನೃತ್ಯದ್ದೇ ಹಾವಳಿಯಾಗಿಬಿಟ್ಟಿದೆ. ಯುವಜನತೆ ರೀಲ್ಸ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಮೆರಿಕಾದ ನ್ಯೂಯಾರ್ಕ್‌ ಟೈಮ್ ಸ್ಕ್ವೇರ್‌ನಲ್ಲಿ ಐಶ್ವರ್ಯಾ ರೈ ಅವರು ಅಭಿನಯಿಸಿರುವ ಜನಪ್ರಿಯ ಗೀತೆ ಬರ್ಸೋ ರೇಗೆ ದೇಸಿ ಡ್ಯಾನ್ಸರ್ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ.

ಹೌದು, ಈ ವಿಡಿಯೋ ನೋಡಲು ಮಾತ್ರ ಖಂಡಿತಾ ಮರಿಬೇಡಿ. ಯಾಕಂದ್ರೆ ಯುವತಿಯರ ಗುಂಪು ಬಹಳ ಅದ್ಭುತವಾಗಿ ಕುಣಿದು ಕುಪ್ಪಳಿಸಿದೆ. ಖಂಡಿತಾ ವಿಡಿಯೋ ನಿಮ್ಮನ್ನು ಸಂತೋಷಗೊಳಿಸುತ್ತದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, 12 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ಎಶ್ಪತ್ ಎಂಬ ಹೆಸರಿನ ಡಾನ್ಸರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮಳೆಯ ಮಧ್ಯೆ ನಾಲ್ಕು ಮಂದಿ ಯುವತಿಯರು ಬಹಳ ಉತ್ಸಾಹದಿಂದ ಹೆಜ್ಜೆ ಹಾಕಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋಗೆ ಟೈಮ್ಸ್ ಸ್ಕ್ವೇರ್‌ನಲ್ಲಿ ಮಧ್ಯರಾತ್ರಿಯಲ್ಲಿ ಮಳೆಯಾಗುತ್ತಿರುವಾಗ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ನೆಟ್ಟಿಗರು ಯುವತಿಯರ ನೃತ್ಯ ಪ್ರದರ್ಶನವನ್ನು ಸಂಪೂರ್ಣವಾಗಿ ಆನಂದಿಸಿದ್ದಾರೆ. ಕಾಮೆಂಟ್‌ ವಿಭಾಗದಲ್ಲಿ ಹೃದಯ, ಪ್ರೀತಿ ಎಮೋಜಿಗಳಿಂದ ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...