
ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ಸಮಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬಂದ ಹರ್ಮನ್ಪ್ರೀತ್ ಕೌರ್ ರನೌಟ್ ಆದ ರೀತಿ ಈ ಮಾತಿಗೆ ಇನ್ನಷ್ಟು ಪುಷ್ಠಿ ನೀಡಿದ್ದಂತೂ ಸುಳ್ಳಲ್ಲ. ಬ್ಯಾಟ್ನಿಂದ ಚೆಂಡನ್ನು ತಳ್ಳಿದ ಬಳಿಕ ಕೊಂಚ ಯಾಮಾರಿದ್ದಕ್ಕೆ ಹರ್ಮನ್ಪ್ರೀತ್ ಕೌರ್ ತಮ್ಮ ವಿಕೆಟ್ ಕಳೆದುಕೊಂಡಿದ್ದಾರೆ.
ಕ್ವೀನ್ ಸ್ಟೌನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ವಿಕೆಟ್ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ. ನ್ಯೂಜಿಲೆಂಡ್ ಐದು ಪಂದ್ಯಗಳ ಏಕದಿನ ಪಂದ್ಯದ ಸರಣಿಯಲ್ಲಿ 3-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಬ್ಯಾಟಿಂಗ್ಗೆ ಇಳಿದಿದ್ದ ಹರ್ಮನ್ಪ್ರೀತ್ ಕೌರ್ ಫ್ರಾನ್ಸಿಸ್ ಮ್ಯಾಕೆ ಎಸೆತವನ್ನು ಎದುರಿಸುತ್ತಿದ್ದರು. ತಮ್ಮೆದುರು ಬಂದ ಚೆಂಡಿಗೆ ಹರ್ಮನ್ಪ್ರೀತ್ ಕೌರ್ ಬ್ಯಾಟು ಬೀಸಿದ ರಭಸಕ್ಕೆ ಚೆಂಡು ನೇರವಾಗಿ ಬೌಲರ್ ಫ್ರಾನ್ಸಿಸ್ ಕೈಗೆ ತಲುಪಿತು. ಇದಾದ ಬಳಿಕ ಕ್ರೀಸ್ಗೆ ಮರಳದ ಹರ್ಮನ್ಪ್ರೀತ್ ಕೌರ್ ಕ್ರೀಸ್ ಹೊರಗೆ ನಿಂತಿದ್ದರು.
ಕೂಡಲೇ ಅಲರ್ಟ್ ಆದ ಫ್ರಾನ್ಸಿಸ್ ತಮ್ಮ ಕೈಲಿದ್ದ ಚೆಂಡನ್ನು ವಿಕೆಟ್ ಕೀಪರ್ಗೆ ಪಾಸ್ ಮಾಡಿದ್ದಾರೆ. ಚೆಂಡು ಸಿಗುತ್ತಿದ್ದಂತೆಯೇ ಕೀಪರ್ ಸ್ಟಂಪ್ಗೆ ಚೆಂಡನ್ನು ತಾಗಿಸುವ ಮೂಲಕ ಕ್ರೀಸ್ ಹೊರಗಿದ್ದ ಹರ್ಮನ್ ಪ್ರೀತ್ ಕೌರ್ರನ್ನು ಅತ್ಯಂತ ಸುಲಭವಾಗಿ ರನೌಟ್ ಮಾಡಿದ್ದಾರೆ.