ಯೂನಿಸ್ ಚಂಡಮಾರುತವು ಬಲವಾದ ಗಾಳಿ ಬೀಸಿದ ಹೊಡೆತಕ್ಕೆ ಬೋಳು ತಲೆಯ ಮನುಷ್ಯನ ವಿಗ್ ಹಾರಿ ಹೋದ ವಿಚಿತ್ರ ಘಟನೆಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಗಾಳಿಯಲ್ಲಿ ಹಾರಿ ಹೋಗುತ್ತಿದ್ದ ವಿಗ್ನ್ನು ಹಿಡಿಯಲು ಬೋಳು ತಲೆಯ ವ್ಯಕ್ತಿಯು ವಿಗ್ನ ಹಿಂದೆ ಓಡಿ ಹೋಗಿದ್ದಾನೆ.
ಸೈಮನ್ ವಿಲ್ಕ್ಸ್ ಎಂಬವರು ಇಂಗ್ಲೆಂಡ್ನ ಬಾರ್ನ್ಸ್ಟೇಪಲ್ನ ಕಾರು ಪಾರ್ಕಿಂಗ್ನಲ್ಲಿ ನಿಂತಿದ್ದ ವೇಳೆಯಲ್ಲಿ ಗಾಳಿಯ ರಭಸಕ್ಕೆ ತಲೆಯ ಮೇಲಿದ್ದ ವಿಗ್ ಹಾರಿ ಹೋಗಿದೆ.
ಅವರು ತಮ್ಮ ವಿಗ್ನ್ನು ಹಿಡಿಯಲು ಹಿಂದೆ ಹಿಂದೆ ಓಡಿದ್ದು ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಬ್ರಿಟನ್ನಲ್ಲಿ ಅತ್ಯಂತ ಕೆಟ್ಟ ಚಂಡಮಾರುತವು ಬೀಸುತ್ತಿರೊದ್ರಿಂದ ಲಕ್ಷಾಂತರ ಸಂಖ್ಯೆಯ ಬ್ರಿಟಿಷ್ ಜನತೆಗೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಐಲ್ ಆಫ್ ವೈಟ್‌ನಲ್ಲಿ ದಾಖಲೆಯ 122mph ಗಾಳಿಯ ತೀವ್ರತೆಯನ್ನು ದಾಖಲಿಸಲಾಗಿದೆ.