ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಹಿನ್ನಲೆ ನಗರ ಪೊಲೀಸ್ ಆಯುಕ್ತರು ಹಾಗೂ ಪಾಲಿಕೆ ಆಯುಕ್ತರು ಆ್ಯಕ್ಟೀವ್ ಆಗಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಎಲ್ಲಾ ಡಿಸಿಪಿಗಳ ಜೊತೆ ಸಭೆ ನಡೆಸಿ ಕರ್ಪ್ಯೂ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ರು. ಯಾವೆಲ್ಲ ಬಂದೋಬಸ್ತ್ ಮಾಡಿಕೊಳ್ಳಬೇಕು, ಎಲ್ಲೆಲ್ಲಿ ಬ್ಯಾರಿಗೇಟ್ ಹಾಕ್ಬೇಕು, ನೈಟ್ ಕರ್ಪ್ಯೂ ಉಲ್ಲಂಘನೆ ಮಾಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಅನ್ನೋ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬಾರ್, ಪಬ್ , ರೆಸ್ಟೋರೆಂಟ್ ಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಸೂಚನೆ ನೀಡಿರುವ ಆಯಕ್ತರು, ಯಾವುದೇ ಕಾರಣಕ್ಕೂ ರಾತ್ರಿ 10 ಗಂಟೆ ಬಳಿಕ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಇರದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು ಮಧ್ಯಾಹ್ನ ದಿಂದಲೆ ಮೈಕ್ ಮೂಲಕ ನೈಟ್ ಕರ್ಪ್ಯೂ ಬಗ್ಗೆ ಅನೌನ್ಸ್ ಮಾಡುವಂತೆ ಹೇಳಿರೋ ಕಮೀಷನರ್, ಹೊಯ್ಸಳಗಳು ಸದಾ ಗಸ್ತಿನಲ್ಲಿ ಇರುವಂತೆ ಸೂಚಸಿದ್ದಾರೆ.
14 ತಿಂಗಳುಗಳ ನಂತರ ಪಾಲಕನೊಂದಿಗೆ ಆನೆಗಳ ಪುರ್ನರ್ಮಿಲನ: ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು
ಇತ್ತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಕರ್ಪ್ಯೂ ಹಿನ್ನಲೆ ಪೊಲೀಸ್ ಕಮಿಷನರ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಬಿಬಿಎಂಪಿ ಪೋಲಿಸ್ ಇಲಾಖೆ ಜೊತೆ ಸೇರಿ ಕೆಲಸ ಮಾಡುತ್ತದೆ ಎಂದಿದ್ದಾರೆ.
ಹೋಂ ಗಾರ್ಡ್ ಮಾರ್ಷಲ್ಸ್ ಗಳನ್ನ ನೇಮಕ ಮಾಡಿದ್ದೇವೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೊರಡಿಸಲಾದ ಆದೇಶಕ್ಕೆ ಸಾರ್ವಜನಿಕರು ಸಹಕರಿಸಬೇಕು. ಯುಕೆ, ಯುಎಸ್ ಎ ನಲ್ಲಿ ಕೇಸ್ ಹೆಚ್ಚಾಗುತ್ತಿವೆ. ಇಲ್ಲಿಯೂ ಅದೇ ಪರಿಸ್ಥಿತಿ ನಿರ್ಮಾಣವಾಗಬಹುದು, ಹಾಗಾಗಿ ಇಂದಿನಿಂದಲೇ ಕ್ರಮ ಕೈಗೊಳ್ಳಬೇಕಿದೆ. ಸಾರ್ವಜನಿಕರು ಇದನ್ನ ಅರ್ಥ ಮಾಡಿಕೊಳ್ಳಬೇಕು , ಕರ್ಪ್ಯೂಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.