alex Certify ನೇಲ್ ಪಾಲಿಶ್ ರಿಮೂವರ್ ನಿಂದ ಇದೆ ಅನೇಕ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇಲ್ ಪಾಲಿಶ್ ರಿಮೂವರ್ ನಿಂದ ಇದೆ ಅನೇಕ ಪ್ರಯೋಜನ

ನೇಲ್ ಪಾಲಿಶ್ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸ್ತಾರೆ. ಆದ್ರೆ ಈ ನೇಲ್ ಪಾಲಿಶ್ ರಿಮೂವರ್ ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ನೇಲ್ ಪಾಲಿಶ್ ರಿಮೂವರನ್ನು ಇನ್ನೂ ಯಾವ್ಯಾವುದಕ್ಕೆ ಬಳಸಬಹುದು ಅಂತಾ ನಾವು ಹೇಳ್ತೇವೆ.

ಸಾಮಾನ್ಯವಾಗಿ ಲೆದರ್ ಶೂ ಗಳಿಗಾದ ಕಲೆ ಹೋಗುವುದಿಲ್ಲ. ಆಗ ನೇಲ್ ಪಾಲಿಶ್ ರಿಮೂವರ್ ನೆರವಿಗೆ ಬರುತ್ತೆ. ಇದರಿಂದ ಶೂ ಕ್ಲೀನ್ ಮಾಡಬಹುದು.

ಕೆಲವೊಮ್ಮೆ ಫೆವಿಕ್ವಿಕ್ ಕೈಗೆ ಅಂಟಿ ಬಿಡುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಹೋಗುವುದಿಲ್ಲ. ನೇಲ್ ಪಾಲಿಶ್ ರಿಮೂವರ್ ನಿಂದ ಇದನ್ನು ಸುಲಭವಾಗಿ ತೆಗೆಯಬಹುದು.

ಲೋಹದ ಸ್ಟಿಕ್ಕರ್ ತೆಗೆಯುವುದು ಸುಲಭವಲ್ಲ. ಒಂದು ವೇಳೆ ಸ್ಟಿಕ್ಕರ್ ಸುಲಭವಾಗಿ ಬಂದ್ರೂ ಅದರ ಕಲೆ ಹಾಗೆ ಉಳಿದುಬಿಡುತ್ತದೆ. ಆಗ ನೇಲ್ ಪಾಲಿಶ್ ರಿಮೂವರ್ ಬಳಸಿದ್ರೆ ಕಲೆ ಸುಲಭವಾಗಿ ಹೋಗುತ್ತದೆ.

ಬಟ್ಟೆಯ ಮೇಲೆ ಶಾಯಿ ಕಲೆಯಾದ್ರೆ ರಿಮೂವರ್ ಬಳಸಿ. ಕಲೆಯಾದ ಜಾಗಕ್ಕೆ ರಿಮೂವರ್ ಹಚ್ಚಿ ನಂತ್ರ ಸೋಪಿನಿಂದ ತೊಳೆಯಿರಿ.

ನೆಲದ ಮೇಲಿನ ಕಲೆಯನ್ನು ಕೂಡ ರಿಮೂವರ್ ಮೂಲಕ ಸುಲಭವಾಗಿ ಕ್ಲೀನ್ ಮಾಡಬಹುದು. ಕಲೆಯಾದ ಜಾಗಕ್ಕೆ ನೇಲ್ ಪಾಲಿಶ್ ರಿಮೂವರ್ ಹಾಕಿ ತಿಕ್ಕಿದ್ರೆ ಕಲೆ ಮಾಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...