ಛಾಯಾಚಿತ್ರಗಳನ್ನು ಕ್ಲಿಕ್ಕಿಸುವಾಗ ಸರಿಯಾದ ಸಮಯವು ಅತ್ಯಗತ್ಯ. ಒಂದು ಸೆಕೆಂಡ್ ಅಥವಾ ಎರಡು ಸೆಕೆಂಡ್ ಸಮಯದ ವಿಳಂಬವು ಛಾಯಾಚಿತ್ರಗಳಿಗೆ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಉಂಟುಮಾಡಬಹುದು. ಕೆಲವೊಮ್ಮೆ ಈ ಛಾಯಾಚಿತ್ರವು ಭ್ರಮೆಯಂತೆ ಕಾಣಿಸಬಹುದು. ಪಂದ್ಯವೊಂದರಲ್ಲಿ ಗೋಲು ಹೊಡೆದು ಸಂಭ್ರಮಿಸುತ್ತಿರುವ ಫುಟ್ಬಾಲ್ ಆಟಗಾರರ ಛಾಯಾಚಿತ್ರ ಇದಕ್ಕೆ ಸಾಕ್ಷಿಯಾಗಿದೆ. ಫೋಟೋವನ್ನು ಬೋರೆಡ್ಪಂಡ ವೆಬ್ಸೈಟ್ನಲ್ಲಿ ಹಂಚಿಕೊಳ್ಳಲಾಗಿದೆ.
ಈ ಛಾಯಾಚಿತ್ರದಲ್ಲಿ, ಇಬ್ಬರು ಆಟಗಾರರು ಪರಸ್ಪರ ತಬ್ಬಿಕೊಳ್ಳುವುದನ್ನು ನಾವು ನೋಡಬಹುದು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಚಿತ್ರದಿಂದ ಗೊಂದಲಕ್ಕೊಳಗಾಗಿದ್ದಾರೆ. ಆಟಗಾರರು ತಮ್ಮ ಗೆಲುವಿನಲ್ಲಿ ಸಂತೋಷಪಡುತ್ತಿದ್ದಾರೆ ಎಂದು ಅವರು ಸ್ಪಷ್ಟವಾದ ಊಹೆಯನ್ನು ಮಾಡಬಹುದು. ಆದರೆ, ಯಾವ ಆಟಗಾರನು ಯಾರನ್ನು ತಬ್ಬಿಕೊಂಡಿದ್ದಾನೆ..? ಎಂಬುದು ಮಾತ್ರ ಭ್ರಮನಿರಸನಗೊಳಿಸಿದೆ.
ಈ ಚಿತ್ರವು ಆಟಗಾರನು ತನ್ನ ಸಹ ಆಟಗಾರನನ್ನು ಹಿಂದಿನಿಂದ ತಬ್ಬಿಕೊಂಡಿದ್ದಾರೆ. ಆದರೆ, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಗೊಂದಲಕ್ಕೀಡು ಮಾಡಿದ ಪ್ರಶ್ನೆಯೆಂದರೆ, ಮುಂದೆ ನಿಂತಿರುವ ಇನ್ನೊಬ್ಬ ಆಟಗಾರ ತನ್ನ ಸಹ ಆಟಗಾರನನ್ನು ಹಿಂದಿನಿಂದ ಹೇಗೆ ತಬ್ಬಿಕೊಳ್ಳಬಹುದು. ಈ ಫೋಟೋ ಬಳಕೆದಾರರಿಗೆ ಅರ್ಥಮಾಡಿಕೊಳ್ಳಲು ಅತ್ಯಂತ ಕಷ್ಟಕರವಾದ ಸವಾಲಾಗಿತ್ತು. ಈ ರಹಸ್ಯವನ್ನು ಡಿಕೋಡ್ ಮಾಡಲು ಅನೇಕರು ಈ ಛಾಯಾಚಿತ್ರದ ಸಂಪೂರ್ಣ ನಕಲನ್ನು ಸಂಗ್ರಹಿಸಿದ್ರು.
ಅಂತಿಮವಾಗಿ ಬಳಕೆದಾರರು ತೀರ್ಮಾನಕ್ಕೆ ಬಂದ್ರು. ಬಳಕೆದಾರರ ಪ್ರಕಾರ, ಮೈದಾನದಲ್ಲಿ ಮೂರು ಆಟಗಾರರು ಇದ್ದರು. ಇಬ್ಬರು ಆಟಗಾರರು ಒಬ್ಬರನ್ನೊಬ್ಬರು ತಬ್ಬಿಕೊಂಡ ಕ್ಷಣ, ಮೂರನೇ ಆಟಗಾರನು ಅವರ ಹಿಂದೆ ಇದ್ದನು. ಈ ಮೂರನೇ ಆಟಗಾರ ಈ ಇಬ್ಬರು ಆಟಗಾರರ ನಡುವೆ ನಿಂತಿದ್ದಾಗ, ಕ್ಯಾಮರಾಪರ್ಸನ್ ಫೋಟೋ ಕ್ಲಿಕ್ಕಿಸಿದ್ದಾರೆ. ಇದು ಆ ಛಾಯಾಚಿತ್ರದ ಸಂಪೂರ್ಣ ದೃಷ್ಟಿಕೋನವನ್ನು ಬದಲಾಯಿಸಿತು. ಇದರಿಂದಾಗಿ ಮೂರನೇ ಆಟಗಾರನು ಇಬ್ಬರನ್ನು ಅಪ್ಪಿಕೊಂಡಂತೆ ಕಾಣಿಸಿಕೊಂಡಿದ್ದಾರೆ.