alex Certify ನೆಚ್ಚಿನ ನಟನ ಹೆಸರನ್ನು ಬಿಚ್ಚಿಟ್ಟ ದೀಪಿಕಾ ಪಡುಕೋಣೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ನಟನ ಹೆಸರನ್ನು ಬಿಚ್ಚಿಟ್ಟ ದೀಪಿಕಾ ಪಡುಕೋಣೆ….!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ನಟನೆಯ ಗೆಹರಿಯಾ ಸಿನಿಮಾ ಇಂದು ಒಟಿಟಿ ವೇದಿಕೆ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿದೆ. ಸದ್ಯ ಇದೇ ಸಿನಿಮಾದಲ್ಲಿ ಪ್ರಮೋಷನ್​ನಲ್ಲಿ ನಟಿ ದೀಪಿಕಾ ಬ್ಯುಸಿಯಾಗಿದ್ದಾರೆ. ಇತ್ತೀಗೆ ಸಂದರ್ಶನವೊಂದರಲ್ಲಿ ದೀಪಿಕಾ ತಾನು ಯಾವ್ಯಾವ ನಟರ ಜೊತೆಯಲ್ಲಿ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂಬ ವಿಚಾರವನ್ನು ರಿವೀಲ್​ ಮಾಡಿದ್ದಾರೆ.

ಸಂದರ್ಶನದಲ್ಲಿ ಈ ವಿಚಾರವಾಗಿ ಮಾತನಾಡಿದ ನಟಿ ದೀಪಿಕಾ ಪಡುಕೋಣೆ, ನನಗೆ ಜ್ಯೂನಿಯರ್​ ಎನ್​ಟಿಆರ್​ ಹಾಗೂ ಅಲ್ಲು ಅರ್ಜುನ್​ ಅವರೆಂದರೆ ತುಂಬಾನೇ ಇಷ್ಟ. ಅದರಲ್ಲೂ ಜ್ಯೂನಿಯರ್​ ಎನ್​ಟಿಆರ್​ ಅಂದರೆ ನನಗೆ ತುಂಬಾನೇ ಇಷ್ಟ. ಅವರಿಗೆ ಅದ್ಭುತವಾಗಿ ವ್ಯಕ್ತಿತ್ವವಿದೆ. ಅದೇ ರೀತಿ ಅಲ್ಲು ಅರ್ಜುನ್​ ಕೂಡ ಎಂದು ಹೇಳಿದರು.

ಇದನ್ನು ಹೊರತುಪಡಿಸಿ ದೀಪಿಕಾ ಪಡುಕೋಣೆ ಹಾಲಿವುಡ್​​ ಸಿನಿಮಾದ ಹಿಂದಿ ಆವೃತ್ತಿ ʼದಿ ಇಂಟರ್ನ್​ʼನಲ್ಲಿ ನಟಿ ದೀಪಿಕಾ ನಟಿಸುತ್ತಿದ್ದಾರೆ. ಪಿಕು ಸಿನಿಮಾದ ಬಳಿಕ ಈ ಸಿನಿಮಾದಲ್ಲಿ ನಟ ಅಮಿತಾಬ್​ ಬಚ್ಛನ್​ ಹಾಗೂ ದೀಪಿಕಾ ಪಡುಕೋಣೆ ಮತ್ತೆ ಒಂದಾಗಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆಯಲ್ಲಿ ಹಿರಿಯ ನಟ ರಿಷಿ ಕಪೂರ್​ ನಟಿಸಬೇಕಿತ್ತು. ಆದರೆ ಅವರು ನಿಧನರಾದ ಬಳಿಕ ಈ ಸ್ಥಾನಕ್ಕೆ ಅಮಿತಾಬ್​ ಬಚ್ಛನ್​ ಆಯ್ಕೆಯಾಗಿದ್ದಾರೆ. ನಟ ಪ್ರಭಾಸ್​ ಜೊತೆಗೆ ನಾಗ್​ ಅಶ್ವಿನ್​ ಅವರ ಇನ್ನೂ ಹೆಸರಿಡದ ಸಿನಿಮಾದಲ್ಲಿ ದೀಪಿಕಾ, ಅಮಿತಾಬ್​ ಬಚ್ಚನ್​ ಜೊತೆಯಲ್ಲಿ ಮತ್ತೊಮ್ಮೆ ಬಣ್ಣ ಹಚ್ಚಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...