ನುಗ್ಗೇಕಾಯಿ ಪೋಷಕಾಂಶಗಳ ಕಣಜ ಎಂಬುದು ನಿಮಗೆ ತಿಳಿದಿರಬಹುದು. ಅದರೆ ಅದರ ಸೊಪ್ಪಿನಲ್ಲೂ ಹೇರಳವಾದ ಔಷಧೀಯ ಗುಣಗಳಿವೆ.
ನುಗ್ಗೆ ಸೊಪ್ಪನ್ನು ಸಾರು, ಪಲ್ಯ, ರೊಟ್ಟಿಯ ರೂಪದಲ್ಲಿ ನಾವು ಸೇವಿಸಬಹುದು. ಹಸಿಯಿದ್ದಾಗ ಕಹಿ ಎನಿಸಿದರೂ ಬೇಯಿಸಿದ ಬಳಿಕ ವಿಶಿಷ್ಟ ರುಚಿ ಕೊಡುವ ಈ ಸೊಪ್ಪು ನಿಮ್ಮ ಹಿತ್ತಲಲ್ಲೇ ಇದ್ದರೆ ತಡ ಮಾಡದಿರಿ.
ನುಗ್ಗೆ ಸೊಪ್ಪು ಮುಳುಗುವವರೆಗೆ ನೀರು ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಚಿಟಿಕೆ ಉಪ್ಪು ಹಾಗೂ ಕರಿಮೆಣಸಿನ ಪುಡಿ ಬೆರೆಸಿ ಮಿಶ್ರಣ ತಯಾರಿಸಿ. ಈ ಕಷಾಯವನ್ನು ಕುಡಿಯಿರಿ. ಇದರಲ್ಲಿ ಐರನ್, ವಿಟಮಿನ್ಸ್ ಹಾಗೂ ಮಿನರಲ್ ಗಳು ಹೇರಳವಾಗಿ ಸಿಗುತ್ತವೆ. ಕ್ಯಾರೆಟ್ ನ ಹತ್ತು ಪಟ್ಟು ಹೆಚ್ಚು ವಿಟಮಿನ್ ಎ ಇದರಲ್ಲಿದೆ ಎನ್ನಲಾಗಿದೆ.
ನುಗ್ಗೆಸೊಪ್ಪಿನ ಕಷಾಯ ನಿತ್ಯ ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಶ್ವಾಸಕೋಶ ಮತ್ತು ಯಕೃತ್ ಸಮಸ್ಯೆ ನಿವಾರಣೆಗೆ ಇದು ಉಪಕಾರಿ. ಥೈರಾಯ್ಡ್ ಸಮಸ್ಯೆಯನ್ನೂ ಇದು ನಿಯಂತ್ರಿಸುತ್ತದೆ. ರಕ್ತಹೀನತೆ ಸಮಸ್ಯೆ ಕಾಡದಂತೆಯೂ ಇದು ನೋಡಿಕೊಳ್ಳುತ್ತದೆ.
ಈ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಚಟ್ನಿ ಪುಡಿ ರೂಪದಲ್ಲೂ ಸೇವಿಸಬಹುದು. ಇದು ಆರಂಭದಲ್ಲಿ ಕಹಿ ಎನಿಸಿದರೂ ಕ್ರಮೇಣ ಅಭ್ಯಾಸ ಮಾಡಿಕೊಂಡರೆ ತಿನ್ನಬಹುದು.