ಮಹಾರಾಷ್ಟ್ರದಲ್ಲಿ ಥಾಳಿಪಿಟ್ಟು ಪ್ರಸಿದ್ಧಿ ಪಡೆದಿದೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು.
ಥಾಳಿಪಿಟ್ಟು ಮಾಡಲು ಬೇಕಾಗುವ ಪದಾರ್ಥ:
1 ಕಪ್ ಕಡಲೆ ಹಿಟ್ಟು
3 ಚಮಚ ಜೋಳದ ಹಿಟ್ಟು
3 ಕಪ್ ಗೋಧಿ ಹಿಟ್ಟು
2 ಕಪ್ ಅಕ್ಕಿ ಹಿಟ್ಟು
1 ಮಧ್ಯಮ ಗಾತ್ರದ ಈರುಳ್ಳಿ
1 ಮಧ್ಯಮ ಗಾತ್ರದ ಟೊಮೆಟೊ
1 ಚಮಚ ಕೊತ್ತಂಬರಿ ಸೊಪ್ಪು
2 ಹಸಿ ಮೆಣಸಿನಕಾಯಿ
ಅಗತ್ಯವಿರುವಷ್ಟು ಎಣ್ಣೆ ಮತ್ತು ಉಪ್ಪು
ಥಾಳಿಪಿಟ್ಟು ಮಾಡುವ ವಿಧಾನ :
ಒಂದು ಪಾತ್ರೆಗೆ ಎಲ್ಲ ಹಿಟ್ಟುಗಳನ್ನು ಹಾಕಿ. ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಬೆರೆಸಿ. ನೀರನ್ನು ಹಾಕಿ ಚೆನ್ನಾಗಿ ನಾದಿ ಸ್ವಲ್ಪ ಸಮಯ ಇಡಿ. ನಂತ್ರ ಉಂಡೆಗಳನ್ನು ಮಾಡಿ ಲಟ್ಟಿಸಿ ತವಾ ಮೇಲೆ ಬೇಯಿಸಿ. ಚಟ್ನಿ ಜೊತೆ ಸವಿಯಿರಿ.