ಕೊರೋನಾ ಸಮಸ್ಯೆ ಬಹುವಾಗಿ ಕಾಡುತ್ತಲೇ ಬಾಯಿಯ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಹಾಗಿದ್ದರೆ ಸರಿಯಾಗಿ ಹಲ್ಲುಜ್ಜುವುದು ಹೇಗೆ?
ಹಲ್ಲುಜ್ಜುವ ಮೊದಲು ಬ್ರಷ್ ಅನ್ನು ಸರಿಯಾಗಿ ತೊಳೆಯಿರಿ. ರಾತ್ರಿಯ ವೇಳೆ ಬ್ರಶ್ ಅನ್ನು ಹಲ್ಲಿ ಇಲ್ಲವೇ ಕೀಟಗಳು ಮುಟ್ಟಿ ಹೋಗಿರಬಹುದು.
ಪೇಸ್ಟ್ ನ ಪ್ರಮಾಣ ಹೆಚ್ಚು ಬೇಕಿಲ್ಲ. ಬ್ರಷ್ ನ ಆ ತುದಿಯಿಂದ ಈ ತುದಿತನಕ ತುಂಬುವಷ್ಟು ಪೇಸ್ಟ್ ಹಚ್ಚ ಬೇಕಿಲ್ಲ. ಬ್ರಷ್ ನಲ್ಲಿ ಕಾಲು ಭಾಗಕ್ಕೆ ತುಂಬುವಷ್ಟು ಪೇಸ್ಟ್ ಹಾಕಿಕೊಂಡರೆ ಸಾಕು.
ವಿಟಮಿನ್ ʼಸಿʼ ಕೊರತೆ ಕಂಡು ಹಿಡಿಯುವುದು ಹೇಗೆ….?
ಬ್ರಷ್ ನಿಮ್ಮ ಹಲ್ಲನ್ನು ಸ್ವಚ್ಛಗೊಳಿಸುತ್ತದೆ, ಪೇಸ್ಟ್ ಅಲ್ಲ. ಹಾಗಾಗಿ ನಿಮ್ಮ ಕೈಯ ನೆರವಿನಿಂದ ನೀವು ಹೇಗೆ ಬ್ರಷ್ ಮಾಡುತ್ತೀರಿ ಎಂಬುದು ಮುಖ್ಯ. ಪೇಸ್ಟ್ ಬಾಯಿಗೆ ಪ್ರೆಶ್ ನೆಸ್ ಕೊಡುತ್ತದೆ ಅಷ್ಟೇ.
ಕೆಳಗಿನ ಭಾಗದಿಂದ ಒಂದೊಂದು ಹಲ್ಲಿಗೆ ಬ್ರಷ್ ಮಾಡುತ್ತಾ ಬನ್ನಿ. ಬಳಿಕ ಮೇಲ್ಭಾಗಕ್ಕೆ ಬ್ರಷ್ ಮಾಡಿ. ಬ್ರಷ್ ಅನ್ನು ನೇರವಾಗಿ ಹಿಡಿದುಕೊಳ್ಳಿ. ಹಲ್ಲುಜ್ಜಿದ ಬಳಿಕ ನಾಲಗೆಯನ್ನು ಸ್ವಚ್ಛಗೊಳಿಸಲು ಮರೆಯದಿರಿ. ಇದಕ್ಕಾಗಿ ಟಂಗ್ ಕ್ಲೀನರ್ ಬಳಸುವುದು ಒಳ್ಳೆಯದು. ಕೊನೆಗೆ ಕೈ ಬೆರಳಿನ ಸಹಾಯದಿಂದ ವಸಡನ್ನು ತಿಕ್ಕಿ ಸ್ವಚ್ಛಗೊಳಿಸಿ.