alex Certify ನೀವು ಯಾವಾಗಲೂ ಒತ್ತಡದಲ್ಲಿರುತ್ತೀರಾ ? ಈ ರೀತಿ ಮಾಡಿದ್ರೆ ನಿಮಿಷಗಳಲ್ಲೇ ಮಾಯವಾಗುತ್ತೆ ಸ್ಟ್ರೆಸ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಯಾವಾಗಲೂ ಒತ್ತಡದಲ್ಲಿರುತ್ತೀರಾ ? ಈ ರೀತಿ ಮಾಡಿದ್ರೆ ನಿಮಿಷಗಳಲ್ಲೇ ಮಾಯವಾಗುತ್ತೆ ಸ್ಟ್ರೆಸ್‌…..!

ಇತ್ತೀಚಿನ ದಿನಗಳಲ್ಲಿ ಜನರು ಬಿಡುವಿಲ್ಲದ ಜೀವನಶೈಲಿಯಿಂದಾಗಿ ಸದಾ ಟೆನ್ಷನ್‌ನಲ್ಲಿ ಬದುಕುತ್ತಾರೆ. ಕೆಲವರಿಗೆ ತಮ್ಮ ಭವಿಷ್ಯದ ಚಿಂತೆಯಾದ್ರೆ, ಇನ್ನು ಕೆಲವರಿಗೆ ಕುಟುಂಬ, ಉದ್ಯೋಗದ ಟೆನ್ಷನ್‌. ಆದರೆ ಒತ್ತಡ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಒತ್ತಡ ತೆಗೆದುಕೊಳ್ಳುವುದರಿಂದ ನೀವು ಅನೇಕ ರೋಗಗಳಿಗೆ ಗುರಿಯಾಗಬಹುದು. ಹಾಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಂಡು ನಿರಾಳರಾಗಿರುವುದು ಹೇಗೆ ಅನ್ನೋದನ್ನು ನೋಡೋಣ. ಕೆಲವು ವಿಚಾರಗಳನ್ನು ಅಳವಡಿಸಿಕೊಂಡರೆ ಒತ್ತಡವನ್ನು ನಿವಾರಿಸಬಹುದು.

ಹೆಚ್ಚು ಯೋಚಿಸುವುದನ್ನು ತಪ್ಪಿಸಿ: ನಿಮ್ಮ ಉದ್ವೇಗದ ಹಿಂದಿನ ಕಾರಣವನ್ನು ಕಂಡುಹಿಡಿಯುವುದು ಬಹುಮುಖ್ಯ. ಅತಿಯಾದ ಯೋಚನೆಯೇ ನಮ್ಮ ಬಹುತೇಕ ಟೆನ್ಷನ್‌ಗಳಿಗೆ ಕಾರಣವಾಗಿರುತ್ತದೆ. ಹೆಚ್ಚು ಯೋಚಿಸುವುದನ್ನು ತಪ್ಪಿಸಿದ್ರೆ ನಿಮ್ಮ ಒತ್ತಡ ಕಡಿಮೆಯಾಗಿ ಸಂತೋಷದಿಂದಿರಬಹುದು.

ಸಂತೋಷವಾಗಿರಲು ಕಾರಣ ಹುಡುಕಿ: ಯಾವಾಗಲೂ ಸಂತೋಷವಾಗಿರುವುದು ತುಂಬಾ ಕಷ್ಟ. ಆದರೆ ಅದು ಅಸಾಧ್ಯವೇನಲ್ಲ. ಆದ್ದರಿಂದ ನಿಮ್ಮ ಸುತ್ತಲಿನ ವಾತಾವರಣವನ್ನು ಶಾಂತವಾಗಿಡಲು ಮತ್ತು ಸಮಾಧಾನದಿಂದಿಡಲು ಪ್ರಯತ್ನಿಸಿ. ಸಂತೋಷದಿಂದ ನಿಮ್ಮ ಅನೇಕ ಸಮಸ್ಯೆಗಳು ದೂರವಾಗುತ್ತವೆ.

ಜಗಳದಿಂದ ದೂರವಿರಿ: ಜಗಳವಾಡುವಾಗ ನಮಗೆ ಹೆಚ್ಚು ಸ್ಟ್ರೆಸ್‌ ಆಗುತ್ತದೆ. ಹಾಗಾಗಿ ಜಗಳವಾಡುವಂಥಹ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಿ. ಯಾರೊಂದಿಗಾದರೂ ಜಗಳವಾಡುವ ಸ್ಥಿತಿ ಬಂದಾಗಲೂ ಶಾಂತವಾಗಿ ಯೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ವ್ಯಾಯಾಮ: ಅನೇಕ ಜನರು ವ್ಯಾಯಾಮ ಮಾಡುವುದಿಲ್ಲ, ಏಕೆಂದರೆ ಅವರು ಯಾವಾಗಲೂ ಒತ್ತಡದಲ್ಲಿರುತ್ತಾರೆ. ಬೆಳಗ್ಗೆ ಎದ್ದ ತಕ್ಷಣ 40 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಪ್ರಯತ್ನಿಸಿ. ವ್ಯಾಯಾಮವು ಒತ್ತಡವನ್ನು ದೂರ ಮಾಡುತ್ತದೆ. ವ್ಯಾಯಾಮ ಮಾಡುವಾಗ, ನಿಮ್ಮ ದೇಹ ಮತ್ತು ಮನಸ್ಸು ಸಂಪೂರ್ಣವಾಗಿ ಶಾಂತವಾಗಿರುತ್ತದೆ.

ನಿಮಗೆ ಇಷ್ಟವಾಗಿದ್ದನ್ನು ಮಾಡಿ: ಕೆಲವು ಕೆಲಸಗಳು ನಮಗೆ ಖುಷಿ ಕೊಡುತ್ತವೆ. ಮನಸ್ಸಿಗೆ ತೃಪ್ತಿ ಸಮಾಧಾನ ತರುತ್ತವೆ. ಅದನ್ನೇ ಮಾಡುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...