alex Certify ನೀವು ಮಾಡುವ ಈ ತಪ್ಪುಗಳಿಂದಲೇ ಬರುತ್ತೆ ವಿಪರೀತ ಬೆನ್ನು ನೋವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಮಾಡುವ ಈ ತಪ್ಪುಗಳಿಂದಲೇ ಬರುತ್ತೆ ವಿಪರೀತ ಬೆನ್ನು ನೋವು

ಇತ್ತೀಚಿನ ದಿನಗಳಲ್ಲಿ ಬೆನ್ನುನೋವಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ವಯಸ್ಸಾದಂತೆಲ್ಲ ನೋವು ಉಲ್ಬಣವಾಗುತ್ತಲೇ ಹೋಗುತ್ತದೆ. ವಿಪರೀತ ಬೆನ್ನು ನೋವು ಶುರುವಾದ್ರೆ ಹಾಸಿಗೆ ಹಿಡಿಯೋ ಪರಿಸ್ಥಿತಿ ಬರಬಹುದು. ಕೆಲಸ ಮಾಡೋದು ಹಾಗಿರಲಿ, ನಡೆದಾಡೋದು ಸಹ ಕಷ್ಟವಾಗಬಹುದು.

ನಂತರ ಆಸ್ಪತ್ರೆಗೆ ಅಲೆಯೋದು ಅನಿವಾರ್ಯವಾಗಿಬಿಡುತ್ತದೆ. ಹಾಗಾಗಿ ಯಾವ ಕಾರಣಕ್ಕೆ ನಿಮಗೆ ಬೆನ್ನು ನೋವು ಬರ್ತಿದೆ ಅನ್ನೋದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಬೆನ್ನು ನೋವಿಗೆ ಪ್ರಮುಖ ಕಾರಣ ನಿಮ್ಮ ಜೀವನ ಶೈಲಿ. ಸರಿಯಾದ ರೀತಿಯಲ್ಲಿ ಮಲಗದೇ ಇರುವುದು, ಹೆಚ್ಚು ಹೊತ್ತು ಕುಳಿತೇ ಕಾಲ ಕಳೆಯುವುದು, ಕುಳಿತುಕೊಳ್ಳುವ ಭಂಗಿಯಲ್ಲಿ ತಪ್ಪಾದರೂ ಬೆನ್ನು ನೋವು ಬರುತ್ತದೆ.

ತುಂಬಾ ಮೃದುವಾದ ಹಾಸಿಗೆಯಲ್ಲಿ ಮಲಗಿದರೂ ಬೆನ್ನು ನೋವು ಬರುತ್ತದೆ. ಮನೆಯಲ್ಲಿ ಟಿವಿ ನೋಡುವಾಗ ಅಥವಾ ಲ್ಯಾಪ್‌ಟಾಪ್‌ ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ, ಫೋನ್‌ ಸಂಭಾಷಣೆಯ ವೇಳೆ ದೇಹ ನೆಟ್ಟಗಿರುವಂತೆ ನೋಡಿಕೊಳ್ಳಿ. ನೀರು ತುಂಬಿದ ಬಕೆಟ್, ಭಾರವಾದ ಚೀಲ ಅಥವಾ ಭಾರವಾದ ವಸ್ತುವನ್ನು ಎತ್ತುವಾಗ ಜಾಗರೂಕರಾಗಿರಿ. ಇದು ಸೊಂಟದಲ್ಲಿ ಕಂಪನವನ್ನು ಉಂಟುಮಾಡುತ್ತದೆ.

ಜಿಮ್‌ನಲ್ಲಿ ಅಥವಾ ಮನೆಯಲ್ಲಿ ತಪ್ಪಾಗಿ ವ್ಯಾಯಾಮ ಮಾಡುವುದು ಬೆನ್ನುನೋವಿಗೆ ಕಾರಣವಾಗುತ್ತದೆ. ಯೋಗ ಅಥವಾ ಸ್ಟ್ರೆಚಿಂಗ್ ಮಾಡುವಾಗ ಉಳುಕಿ ಹೋಗಬಹುದು. ಬೆನ್ನು ನೋವಿಗೆ ಸುಲಭ ಪರಿಹಾರಗಳು ಕೂಡ ಇವೆ.

ಓಮ ಅಥವಾ ಅಜ್ವೈನ್‌ ಅನ್ನು ಹುರಿದು, ಜಗಿದು ತಿನ್ನಿರಿ. ಈ ರೀತಿ ಪ್ರತಿದಿನ ಮಾಡುವುದರಿಂದ ಬೆನ್ನು ನೋವು ಮಾಯವಾಗುತ್ತದೆ. 7 ದಿನಗಳಲ್ಲೇ ವ್ಯತ್ಯಾಸವನ್ನು ನೀವು ಗಮನಿಸಬಹುದು.

ಬಟ್ಟೆಯಲ್ಲಿ ಉಪ್ಪು ಹಾಕಿ ಬೆಚ್ಚಗೆ ಮಾಡಿ. ಅದನ್ನು ನೋವಿರುವ ಜಾಗದಲ್ಲಿ ಒತ್ತಿಕೊಳ್ಳಿ. ಸಾಸಿವೆ ಎಣ್ಣೆಗೆ 3-4 ಎಸಳು ಬೆಳ್ಳುಳ್ಳಿ ಜಜ್ಜಿ ಹಾಕಿ ಅದನ್ನು ಸೊಂಟಕ್ಕೆ ಬೆನ್ನಿಗೆ ಚೆನ್ನಾಗಿ ಮಸಾಜ್‌ ಮಾಡಿಕೊಳ್ಳಿ. ನಂತರ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸ್ನಾನ ಮಾಡಿ. ಇದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...