ನೀವು ಮಾಂಸಾಹಾರ ಪ್ರಿಯರೇ…? ಹಾಗಾದ್ರೆ ಇಲ್ಲಿದೆ ನಿಮಗೊಂದು ಶಾಕಿಂಗ್ ಸುದ್ದಿ. ಹೆಚ್ಚು ಉಷ್ಣಾಂಶದಲ್ಲಿ ಬೇಯಿಸಿರುವ ಮೀನು ಅಥವಾ ಕೋಳಿಮಾಂಸವನ್ನು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ವಾರಕ್ಕೊಮ್ಮೆ ರಜೆ ಇದೆ ಎಂದೋ ಅಥವಾ ಪಾರ್ಟಿಯ ನೆಪ ಹೇಳಿ ಆಗಾಗ ಮಾಂಸಾಹಾರ ಸೇವಿಸಿ ನಿಮ್ಮ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದರೆ, ನಿಮ್ಮ ಆರೋಗ್ಯದ ಮೇಲೆ ಇದು ಪರಿಣಾಮ ಬೀರಲಿದೆಯಂತೆ. ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸಿದ ಈ ಮಾಂಸ ಪದಾರ್ಥಗಳಿಂದ ಶೇ.17 ರಷ್ಟು ರಕ್ತದೊತ್ತಡ ಪ್ರಮಾಣ ಹೆಚ್ಚಾಗಲಿದೆ ಎಂದು ನ್ಯೂಯಾರ್ಕ್ ನ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.
ಸಾರ್ವಜನಿಕ ಶೌಚಾಲಯಕ್ಕೆ ಹೋಗೋ ಮುನ್ನ ಹುಷಾರ್: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..!
ಕೋಳಿ ಅಥವಾ ಮೀನು ಚೆನ್ನಾಗಿ ಬೆಂದರೆ ಮಾತ್ರ ರುಚಿ ಎಂದು ಅಧಿಕ ಉಷ್ಣಾಂಶದಲ್ಲಿ ಇದನ್ನು ಚೆನ್ನಾಗಿ ಬೇಯಿಸುತ್ತೇವೆ. ಆದರೆ ಹೀಗೆ ಬೇಯಿಸುವುದರಿಂದ ಇದರಲ್ಲಿ ರಾಸಾಯನಿಕಗಳು ಉತ್ಪತ್ತಿಯಾಗುತ್ತದೆಯಂತೆ. ಇದು ಆರೋಗ್ಯಕ್ಕೆ ಹಾನಿಕಾರಕವಂತೆ. ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಎದೆನೋವು, ಉರಿಯೂತ, ಹೃದಯಘಾತದಂತಹ ಆರೋಗ್ಯದ ಸಮಸ್ಯೆಗಳು ಎದುರಾಗುತ್ತದೆಯಂತೆ.