alex Certify ನೀವು ನಂಬಲೇಬೇಕು…! ಅಫ್ಘಾನಿಸ್ಥಾನದಲ್ಲಿ ಚಿತ್ರೀಕರಣವಾಗಿತ್ತು ಬಾಲಿವುಡ್‌ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ನಂಬಲೇಬೇಕು…! ಅಫ್ಘಾನಿಸ್ಥಾನದಲ್ಲಿ ಚಿತ್ರೀಕರಣವಾಗಿತ್ತು ಬಾಲಿವುಡ್‌ ಚಿತ್ರ

ಅಫ್ಘಾನಿಸ್ತಾನವನ್ನು ಕ್ಷಿಪ್ರವಾಗಿ ತೆಕ್ಕೆಗೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್‌ ಸುದ್ದಿಗಳು ಜಾಗತಿಕ ಸಮುದಾಯದ ಗಮನ ಹಿಡಿದಿಟ್ಟಿರುವ ಕಾಲಘಟ್ಟ ಇದು.

ಅಗ್ರ ನಾಯಕರು, ಸೆಲೆಬ್ರಿಟಿಗಳಾದಿಯಾಗಿ ಎಲ್ಲರೂ ಸಹ ಸಾಮಾಜಿಕ ಜಾಲತಾಣದಲ್ಲಿ ತಂತಮ್ಮ ಅಭಿಪ್ರಾಯಗಳನ್ನು ಈ ವಿಚಾರವಾಗಿ ಹಂಚಿಕೊಳ್ಳುತ್ತಿದ್ದು, ಅಫ್ಘನ್ ಜನರ ಪರವಾಗಿ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.

ಇದೇ ವೇಳೆ, ಬಾಲಿವುಡ್ ನಟಿ ಹೇಮಾ ಮಾಲಿನಿ ಹಾಗೂ ಫಿರೋಜ಼್ ಖಾನ್ 1974ರ ’ಧರ್ಮಾತ್ಮಾ’ ಚಿತ್ರದ ಶೂಟಿಂಗ್‌ಗೆಂದು ಅಫ್ಘಾನಿಸ್ತಾನದಲ್ಲಿದ್ದ ವಿಡಿಯೋವೊಂದು ವೈರಲ್ ಆಗಿದೆ.

1974ರ ಆ ದಿನಗಳಲ್ಲಿ ಶಾಂತಿಯುತವಾಗಿದ್ದ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಧರ್ಮಾತ್ಮ ಚಿತ್ರತಂಡವನ್ನು ಅಲ್ಲಿನ ಗಣ್ಯರು ಬರಮಾಡಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇದಕ್ಕೂ ಮುನ್ನ 2013ರಲ್ಲಿ ʼಖುದಾ ಗವಾಹ್ʼ ಚಿತ್ರದ ಶೂಟಿಂಗ್‌ಗೆ ಅಫ್ಘಾನಿಸ್ತಾನಕ್ಕೆ ಹೋಗಿದ್ದ ಅಮಿತಾಭ್ ಬಚ್ಚನ್‌ ಆ ಸಂದರ್ಭದ ಚಿತ್ರವೊಂದನ್ನು ಶೇರ್‌ ಮಾಡಿದ್ದ ಪೋಸ್ಟ್‌ ಒಂದು ಈ ಸಂದರ್ಭದಲ್ಲಿ ಸದ್ದು ಮಾಡುತ್ತಿದೆ.

https://www.instagram.com/reel/CSqiiT_C-lU/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...