alex Certify ನೀರಿನಲ್ಲಿ ಹೊರಳಾಡುತ್ತಾ ಆನೆಯ ಆಟ ಬಲು ಜೋರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನಲ್ಲಿ ಹೊರಳಾಡುತ್ತಾ ಆನೆಯ ಆಟ ಬಲು ಜೋರು…!

ತಿರುಚ್ಚಿ: ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗಿದೆ. ಬಿರು ಬೇಸಿಗೆಯ ಧಗೆಗೆ ದಾಹವಾಗುವುದಲ್ಲದೆ, ಭಾರಿ ಸೆಖೆಯಿಂದ ಕಿರಿಕಿರಿ ಉಂಟಾಗುತ್ತಿದೆ. ಎಲ್ಲಾದ್ರೂ ಕೊಳ ಕಾಣಿಸಿಕೊಂಡ್ರೆ ಹೋಗಿ ಬೀಳೋಣ ಎಂದೆನಿಸುತ್ತದೆ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕೂಡ ಈ ಸೆಖೆಯನ್ನು ತಡೆಯಲಾಗುತ್ತಿಲ್ಲ. ಇದೀಗ ತಮಿಳುನಾಡಿನ ತಿರುಚ್ಚಿ ದೇಗುಲದ ಆನೆ ಸ್ನಾನ ಮಾಡಿರುವ ವಿಡಿಯೋ ವೈರಲ್ ಆಗಿದೆ.

ತಿರುಚ್ಚಿಯ ಅಕಿಲ ಎಂಬ ದೇವಸ್ಥಾನದ ಆನೆಗೆ ಸ್ನಾನ ಮಾಡಿಸಲಾಗಿದೆ. ಇದು  ಕ್ರಿಮಿ ಕೀಟಗಳ ಕಾಟ ತಡೆಯಲು ಹಾಗೂ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಕೂಡ ನೆರವಾಗುತ್ತದೆ. ಏರುತ್ತಿರುವ ತಾಪಮಾನದಿಂದ ಸೆಖೆಯನ್ನು ತಡೆಕೊಳ್ಳಲಾಗದ ಗಜರಾಣಿ ಮಣ್ಣಿನ ಕೊಳದಲ್ಲಿ ಬಿದ್ದು ಹೊರಳಾಡಿದೆ.

ಪ್ರಭಾಸ್ ಸ್ಟೈಲ್‌ನಲ್ಲಿ ಆನೆ ಮೇಲೆ ಹತ್ತಿದ ಮಾವುತ: ರಿಯಲ್ ʼಬಾಹುಬಲಿʼ ಅಂದ್ರು ನೆಟ್ಟಿಗರು..!

ಮಣ್ಣಿನ ಸ್ನಾನವು ಬಿಸಿಲಿನ ತಾಪಮಾನದಿಂದಾಗಿ ಆನೆಯ ಮೈ ಸುಡುವಿಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಮಣ್ಣಿನ ಸ್ನಾನವನ್ನು ಆನಂದಿಸಲು ಅಕಿಲಾಗೆ ವಿಶೇಷವಾದ ಕೊಳವನ್ನು ಒದಗಿಸಲಾಗುತ್ತಿದೆ. 17 ವರ್ಷ ವಯಸ್ಸಿನ ಅಕಿಲಾ, ತಿರುಚ್ಚಿ ನಗರದ ತಿರುವಾನೈಕೋಯಿಲ್‌ನಲ್ಲಿರುವ ಅರುಲ್ಮಿಗು ಜಂಬುಕೇಶ್ವರರ್ ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಆನೆಗಳ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಆನೆಗಳಿಗೆ ಈ ರೀತಿಯ ಸ್ನಾನ ಮಾಡಿಸಲಾಗುತ್ತದೆ. ಜೇಡಿಮಣ್ಣು ಮತ್ತು ಕೆಂಪು ಮಣ್ಣಿನ ಮಿಶ್ರಣವನ್ನು ಹೊಂದಿರುವ 1500 ಚದರ ಅಡಿ ಗೋಡೆಯ ನೆಲದಲ್ಲಿ ಅಕಿಲಾ ಸ್ನಾನ ಮಾಡುತ್ತಾಳೆ.

ಅಂದಹಾಗೆ, ದೇಗುಲದಲ್ಲಿ ಆನೆಯು ತನ್ನ ದೈನಂದಿನ ಕರ್ತವ್ಯಗಳನ್ನು ಬಹಳ ಶ್ರದ್ಧೆಯಿಂದ ನಿರ್ವಹಿಸುತ್ತದೆ. ಆನೆಯು ನಗರದಾದ್ಯಂತ ದೇವಾಲಯದ ಮೆರವಣಿಗೆಯನ್ನು ಮುನ್ನಡೆಸುತ್ತದೆ. ಸಮಾರಂಭಗಳಲ್ಲಿ ವಿಶೇಷ ಬಟ್ಟೆಗಳನ್ನು ಧರಿಸಿ ಭಕ್ತರನ್ನು ಆಶೀರ್ವದಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...