alex Certify ನಿವೃತ್ತ ನೌಕರರು, ವೃದ್ದರಿಗೆ ವರದಾನ ಅಂಚೆ ಕಛೇರಿಯ ಈ ಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತ ನೌಕರರು, ವೃದ್ದರಿಗೆ ವರದಾನ ಅಂಚೆ ಕಛೇರಿಯ ಈ ಯೋಜನೆ

ಈಗಿನ ಸಂದರ್ಭದಲ್ಲಿ ಅತ್ಯಂತ ಸುರಕ್ಷಿತ ಹೂಡಿಕೆ ಜಾಗವೆಂದರೆ ಅದು ಅಂಚೆ ಕಚೇರಿ ಮಾತ್ರವೇ ಎನ್ನುವುದು ಬಹುತೇಕರಿಗೆ ಮನದಟ್ಟು ಆಗಿದೆ. ಷೇರು ಮಾರುಕಟ್ಟೆಗಳ ಏರಿಳಿತ, ಖಾಸಗಿ ಬ್ಯಾಂಕ್‌ಗಳ ದಿಢೀರ್‌ ನಷ್ಟ ಘೋಷಣೆ, ಸಹಕಾರ ಸಂಘಗಳ ದಿವಾಳಿತನದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದ ಸುಪರ್ದಿಯ ಅಂಚೆ ಕಚೇರಿಯೇ ತಮ್ಮ ಉಳಿತಾಯ ಹಾಗೂ ಹೂಡಿಕೆ ಹಣಕ್ಕೆ ಅತ್ಯಂತ ಸುರಕ್ಷಿತ ಜಾಗ ಎಂದು ಅನಿಸುತ್ತಿದೆ.

ಹಿರಿಯ ನಾಗರಿಕರಿಗಾಗಿ ಉಳಿತಾಯ, ಹೂಡಿಕೆ ಯೋಜನೆಗಳಲ್ಲಿ ಅತ್ಯಂತ ಹೆಚ್ಚು ಬಡ್ಡಿ ದರವನ್ನು ಕೊಡುತ್ತಿರುವುದು ಸದ್ಯದ ಮಟ್ಟಿಗೆ ಅಂಚೆ ಇಲಾಖೆ ಮಾತ್ರವೇ. ಈ ಯೋಜನೆಯ ಹೆಸರು ‘ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ ‘ (ಎಸ್‌ಸಿಎಸ್‌ಎಸ್‌). ನಿವೃತ್ತ ನೌಕರರಿಗೆ, ವೃದ್ಧರಿಗೆ ಇದೊಂದು ವರದಾನದ ಯೋಜನೆಯೇ ಸರಿ.

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೆಲವೇ ನಿಮಿಷಗಳಲ್ಲಿ ಸಾಲ ವಿತರಣೆ

ಪ್ರಮುಖವಾಗಿ, ಈ ಯೋಜನೆಯಲ್ಲಿ ಉಳಿತಾಯ ಖಾತೆಯನ್ನು ತೆರೆಯಬೇಕೆಂದರೆ ಆ ವ್ಯಕ್ತಿಗೆ 60 ವರ್ಷಗಳು ಆಗಿರಲೇಬೇಕು. ಸ್ವಯಂಪ್ರೇರಿತ ನಿವೃತ್ತಿ ಪಡೆದವರು (ವಿಆರ್‌ಎಸ್‌) ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.

ಸದ್ಯ ಎಸ್‌ಸಿಎಸ್‌ಎಸ್‌ನಲ್ಲಿ ಖಾತೆ ತೆರೆದು, ನಿವೃತ್ತಿ ವೇಳೆ ಸಿಕ್ಕ ಪಿಎಫ್‌, ಗ್ರ್ಯಾಚುಟಿ ಹಾಗೂ ಇತರ ಹಣದ ಒಟ್ಟಾರೆ ಮೊತ್ತವನ್ನು 10 ಲಕ್ಷ ರೂ.ಗೆ ಮುಟ್ಟಿಸಿ, ಅದನ್ನು ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮುಂದಿನ 5 ವರ್ಷಗಳಲ್ಲಿ 14.28 ಲಕ್ಷ ರೂ. ನಿಮ್ಮ ಖಾತೆಯಲ್ಲಿ ಇರಲಿದೆ. ವಾರ್ಷಿಕ 7.4% ಬಡ್ಡಿಯು ನಿಮ್ಮದಾಗಲಿದೆ. ಬಡ್ಡಿಯೇ ಸುಮಾರು 4,28,964 ರೂ. ಸಿಗಲಿದೆ.

ಐದು ವರ್ಷಗಳ ಮೆಚ್ಯುರಿಟಿ ಅವಧಿ ಇರುವ ಎಸ್‌ಸಿಎಸ್‌ಎಸ್‌ ಯೋಜನೆಯಲ್ಲಿ ಮೂರು ವರ್ಷಗಳ ವಿಸ್ತರಣೆ ಅವಧಿಗೂ ಅವಕಾಶವನ್ನು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...