ಲಂಡನ್: ಯುಕೆದಾದ್ಯಂತ ಯುನೈಸ್ ಚಂಡಮಾರುತದ ಅಪ್ಪಳಿಸಿದ್ದು, ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಲಾಯಿತು.
ವಿಮಾನವೊಂದು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ಯತ್ನ ವಿಫಲವಾಗುವ ಮುನ್ನ ಅಕ್ಕಪಕ್ಕಕ್ಕೆ ತೂಗಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಥೆನ್ಸ್‌ನಿಂದ ಲಂಡನ್‌ಗೆ ತೆರಳಿದ್ದ ಟೆಎಪಿ ಪೋರ್ಚುಗಲ್ ವಿಮಾನವು ರನ್‌ವೇ ಸ್ಪರ್ಶಿಸಲು ಮುಂದಾಗಿದೆ. ಆದರೆ, ಬಲವಾದ ಗಾಳಿಯಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ ಮತ್ತೊಮ್ಮೆ ಟೇಕ್ ಆಫ್ ಮಾಡಿ, ಮತ್ತೆ ಲ್ಯಾಂಡ್ ಆಗಲು ಮುಂದಾಗಿದೆ. ಅಂತಿಮವಾಗಿ ವಿಮಾನವನ್ನು ಅಕ್ಕ-ಪಕ್ಕ ಅಲ್ಲಾಡುತ್ತಲೇ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.
ನಸ್ಸೌದಿಂದ ಬಂದ ಬ್ರಿಟಿಷ್ ಏರ್‌ವೇಸ್ ವಿಮಾನವು ರನ್‌ವೇಯನ್ನು ಸುರಕ್ಷಿತವಾಗಿ ಸ್ಪರ್ಶಿಸುವ ಮೊದಲು ಲ್ಯಾಂಡಿಂಗ್ ಮಾಡಲು ಎರಡು ಬಾರಿ ಪ್ರಯತ್ನಿಸಿದೆ. ನಿಗದಿತ ಲ್ಯಾಂಡಿಂಗ್ ಸಮಯದ 30 ನಿಮಿಷಗಳ ನಂತರ ವಿಮಾನವು ಯಶಸ್ವಿಯಾಗಿ ಲ್ಯಾಂಡ್ ಆಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಯುಕೆನಲ್ಲಿ ಯುನೈಸ್ ಚಂಡಮಾರುತ ಅಪ್ಪಳಿಸಿದ್ದು, ಕಳೆದ 30 ವರ್ಷಗಳಲ್ಲಿ ಪ್ರಬಲವಾದ ಗಾಳಿಯನ್ನು ದಾಖಲಿಸಲಾಗಿದೆ. ಚಂಡಮಾರುತದ ಕಾರಣ ವೇಲ್ಸ್‌ನ ಎಲ್ಲಾ ರೈಲುಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ ಮತ್ತು ಶಾಲೆಗಳನ್ನು ಮುಚ್ಚಲಾಗಿದೆ.