
ಇದೀಗ ವೈರಲ್ ಆಗಿರುವ ವಿಡಿಯೋ ಬಾಂಗ್ಲಾದೇಶದ ಟ್ರಾಫಿಕ್ ಸಿಗ್ನಲ್‌ನಲ್ಲಿ ನಡೆದ ಘಟನೆಯಾಗಿದ್ದು, ಮೋಟರ್‌ಬೈಕ್‌ನ ಹಿಂದಿನ ಸೀಟಿನ ಮೇಲೆ ಕುಳಿತ ಮಹಿಳೆಯೊಬ್ಬರು ಹುಡುಗನ ಕೆನ್ನೆಯನ್ನು ಎಳೆಯುವುದನ್ನು ಕಾಣಬಹುದು.
ಚಿಕ್ಕ ಹುಡುಗನ ಕಣ್ಣಿಗೆ ಏನೋ ಹೋಗಿದೆ ಎಂದು ಅರಿತು ಮಹಿಳೆ ತಕ್ಷಣವೇ ಸಹಾಯ ಮಾಡಿದ್ದಾಳೆ ಮತ್ತು ಅವನ ನೋವನ್ನು ತಗ್ಗಿಸಲು ಅವನ ಕಣ್ಣಿಗೆ ಗಾಳಿ ಊದಿದ್ದಾಳೆ. ಮತ್ತೆ ಅವನ ಕೆನ್ನೆ ಹಿಂಡಿ ನಂತರ ಅವನಿಗೆ ಸ್ವಲ್ಪ ಹಣವನ್ನು ಕೊಟ್ಟಿದ್ದಾರೆ.
ಕಾಮೆಂಟ್‌ಗಳ ವಿಭಾಗದಲ್ಲಿ ಮಹಿಳೆಯ ಗೆಸ್ಚರ್ ಅನ್ನು ಶ್ಲಾಘಿಸಿದರೆ, ಕೆಲವರು ಕೆನ್ನೆ ಎಳೆಯುವಿಕೆಯು ತುಂಬಾ ಹಿಂಸಾತ್ಮಕವಾಗಿದೆ ಎಂದು ಭಾವಿಸಿ ಅಭಿಪ್ರಾಯ ನೀಡಿದ್ದಾರೆ.