ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ್ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ವಾಸುದೇವ್ ಅವರನ್ನು ಬಂಧಿಸಿದ್ದಾರೆ.
ಆದಾಯಕ್ಕಿಂತ ಶೇ.203 ರಷ್ಟು ಆಸ್ತಿಗಳಿಕೆ ಆರೋಪ ವಾಸುದೇವ್ ವಿರುದ್ಧ ಕೇಳಿಬಂದಿದೆ. ಮನೆಗಳನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ಒಟ್ಟು 5 ಮನೆಗಳನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ಕುಟುಂಬಸ್ಥರ ಹೆಸರಲ್ಲಿ ಒಟ್ಟು 28 ಮನೆಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅರ್ಕಾವತಿ ಬಡಾವಣೆಯಲ್ಲಿ 3 ಬಿಡಿಎ ನಿವೇಶನ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಎರಡು ನಿವೇಶನ ಸೇರಿ ಒಟ್ಟು 7 ಬಿಡಿಎ ನಿವೇಶನವನ್ನು ಕೂಡ ವಾಸುದೇವ್ ಹೊಂದಿದ್ದಾರೆ ಎನ್ನಲಾಗಿದೆ.
ವ್ಯಕ್ತಿಗಳ ಮುಖ ಚಹರೆಯನ್ನು ರೋಬೋಟ್ ಗೆ ಅಳವಡಿಸಲು ಮುಂದಾದ ಕಂಪನಿ: ಒಪ್ಪಿಗೆ ನೀಡುವವರಿಗೆ ಭರ್ಜರಿ ಬಹುಮಾನ..!
ಸ್ಕೋಡಾ, ವೋಲ್ವೋ, ಬೆನ್ಝ್, ಟಾಟಾ ಕಂಪನಿಯ 5 ಐಷಾರಾಮಿ ಕಾರುಗಳು, 925.60 ಗ್ರಾಂ ಚಿನ್ನಾಭರಣ, 9 ಕೆ.ಜಿ. ಬೆಳ್ಳಿ, 1.31 ಕೋಟಿ ರೂಪಾಯಿ ಬ್ಯಾಂಕ್ ಖಾತೆಯಲ್ಲಿ ಹಣ, 17.27 ಲಕ್ಷ ನಗದು ಎಸಿಬಿ ದಾಳಿ ವೇಳೆ ಪತ್ತೆಯಾಗಿದೆ. ಅಕ್ರಮ ಆಸ್ತಿಗಳಿಕೆ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ವಾಸುದೇವ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.