alex Certify ನಿರ್ಗತಿಕನ ತಲೆಗೂದಲು ಕತ್ತರಿಸುವಾಗಲೇ ಆಕೆಗೆ ಮೂಡಿತ್ತು ಪ್ರೀತಿ…! ಇದೊಂದು ವಿಶಿಷ್ಟ ʼಪ್ರೇಮ ಕಥೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಗತಿಕನ ತಲೆಗೂದಲು ಕತ್ತರಿಸುವಾಗಲೇ ಆಕೆಗೆ ಮೂಡಿತ್ತು ಪ್ರೀತಿ…! ಇದೊಂದು ವಿಶಿಷ್ಟ ʼಪ್ರೇಮ ಕಥೆʼ

‘ಪ್ರೀತಿ ಮಾಯೆ ಹುಷಾರು’ ಅನ್ನೊ ಮಾತಿದೆ. ಅದು ನಿಜ ಕೂಡಾ ಹೌದು, ಜಾತಿ, ಮತ, ಧರ್ಮ ಇದೆಲ್ಲದಕ್ಕಿಂತಲೂ ಮಿಗಿಲಾದದ್ದು ಪ್ರೀತಿ. ಇದ್ಯಾವುದನ್ನೂ ಗಮನಿಸದೇ ಮೊದಲ ನೋಟದಲ್ಲೆ ಪ್ರೇಮಾಂಕುರವಾಗುತ್ತೆ ಅಲ್ವಾ ಅದನ್ನೇ ಲವ್ ಅಟ್ ಫಸ್ಟ್ ಸೈಟ್ ಅನ್ನುತ್ತಾರೆ. ಹೀಗೆ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದವರ ಲವ್‌ಸ್ಟೋರಿ ಇಲ್ಲಿದೆ ನೋಡಿ.

ಆಕೆ ಮೆಕ್ಸಿಕನ್ ಮೂಲದ ಯುವತಿ, ಎನ್‌ಜಿಒ ಒಂದರಲ್ಲಿ ಆಕೆ ನಿರಾಶ್ರಿತರ, ಅಸಹಾಯಕರನ್ನ ತಲೆ ಕೂದಲು ಕತ್ತರಿಸುವ ಕೆಲಸ ಮಾಡುತ್ತಿದ್ದಳು. ಹಾಗೆ ಒಂದು ದಿನ ಬಂದ ನಿರಾಶ್ರಿತನೊಬ್ಬನ ಕೂದಲನ್ನ ಕತ್ತರಿಸ್ತಾ, ಕತ್ತರಿಸುತ್ತಾ, ಆತನ ಪ್ರೀತಿಯಲ್ಲೇ ಆಕೆ ಬಿದ್ದಿದ್ದಳು. ಆದರೆ ಆ ತಕ್ಷಣವೇ ತೋರಿಸದೇ ಕೊನೆಗೆ ಎರಡು ವರ್ಷದ ನಂತರ ಆತನನ್ನೇ ಜೀವನದ ಸಂಗಾತಿ ಮಾಡಿಕೊಂಡಿದ್ದಾಳೆ.

2009ರಲ್ಲಿ ಮೆಕ್ಸಿಕೋದ ಮೈಕೋಕಾನ್‌ನ ನ್ಯೂವೋ ಸ್ಯಾನ್ ಜುವಾನ್‌ನ ಲುಜ್ ಯೆಸೆನಿಯಾ ಗೆರೊನಿಮೊ ಸೆರ್ನಾ ಅವರು ಕಾರ್ ತೊಳೆಯುತ್ತಿದ್ದ ಅಂಗಡಿಯ ಹೊರಗೆ ಜುವಾನ್ ಮೆಂಡೋಜಾ ಅಲ್ವಿಜರ್ ಅವರನ್ನ ಭೇಟಿಯಾಗುತ್ತಾರೆ. ಲುಜ್ ಅವರು ಜುವಾನ್ ಅವರೊಂದಿಗೆ ಅದೇ ಸಮಯದಲ್ಲಿ ಮೊಟ್ಟ ಮೊದಲ ಬಾರಿ ಮಾತನಾಡಿದ್ದಾರೆ.

ಆ ನಂತರ ಇಬ್ಬರ ನಡುವೆ ಮಾತುಕತೆಯಿಂದ ಮುಂದುವರೆದು ಗೆಳತನ, ಆ ನಂತರ ಒಬ್ಬರಿಗೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಇದಕ್ಕೆ ಇವರಿಬ್ಬರೂ ಎರಡು ವರ್ಷ ಕಾಲಾವಕಾಶ ತೆಗೆದುಕೊಂಡರು. ಈಗ ಇವರಿಬ್ಬರೂ ಮದುವೆಯಾಗಿ 10 ವರ್ಷಗಳಾಗಿವೆ. ಇಬ್ಬರು ಮುದ್ದಾದ ಮಕ್ಕಳು ಇವರಿಬ್ಬರ ಪ್ರೀತಿಯ ಸಂಕೇತಗಳಾಗಿವೆ.

ಲುಜ್ ಅವರು ಹೇಳುವ ಪ್ರಕಾರ, ಇದು ಮೊದಲ ನೋಟದ ಪ್ರೇಮ. ಈತ ಜನರ ಜೊತೆ ವ್ಯವಹರಿಸೋ ರೀತಿ ನನ್ನನ್ನ ಆಕರ್ಷಿಸಿತ್ತು. ಆಗಲೇ ನಾನು ಈತನ ಪ್ರೀತಿಯಲ್ಲಿ ಬಿದ್ದಿದ್ದೆ. ನಾನು ಯಾವಾಗ ಈತನ ಹೇರ್ ಕಟ್ ಮಾಡಿ ಶೇವಿಂಗ್ ಮಾಡಿದೆ, ಆತ ಇಷ್ಟು ಸುಂದರವಾಗಿ ಕಾಣಬಲ್ಲ ಅನ್ನೋ ಅಂದಾಜೇ ನಾನು ಮಾಡಿರಲಿಲ್ಲ. ಎಂದು ತಮ್ಮ ಹಳೆಯ ದಿನಗಳನ್ನ ನೆನಪಿಸಿಕೊಳ್ತಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ಲವ್‌ಸ್ಟೋರಿ ವೈರಲ್ ಆಗಿದೆ. ನೆಟ್ಟಿಗರು ಈ ಸ್ಟೋರಿಯನ್ನ ಓದಿ ಭಾವುಕರಾಗಿದ್ದಾರೆ. ಒಬ್ಬ ನಿರ್ಗತಿಕನ ಜೀವನವನ್ನೇ ಬದಲಾಯಿಸಿರೋ ಕ್ರೆಡಿಟ್ ಆಕೆಗೆ ಕೊಡುತ್ತಿದ್ದಾರೆ.

“ಇದೊಂದು ಅದ್ಭುತವಾದ ಪ್ರೇಮ ಕಥೆ ಎಂದು ಹೇಳುತ್ತಿದ್ದಾರೆ, ನಿಮ್ಮಿಬ್ಬರಿಗೂ ಶುಭಾಶಯ, ಅವನಿಗೆ ಹೊಸ ಬದುಕನ್ನ ಕೊಟ್ಟ ನೀನು ಗ್ರೇಟ್“ ಎಂದು ಈ ಪ್ರೇಮಕಥೆ ಓದಿದವರು ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...