alex Certify ನಿಮ್ಮ ಮನೆಯಲ್ಲಿ ಇದೆಯಾ ಆಮೆ ಮೂರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮನೆಯಲ್ಲಿ ಇದೆಯಾ ಆಮೆ ಮೂರ್ತಿ

Buy Yashika Agancy Metal Feng Shui Tortoise on Plate Showpiece (Golden,  Diameter:5.5 Inch) Online at Low Prices in India - Amazon.inಹಿಂದೂ ಧರ್ಮದಲ್ಲಿ ಆಮೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಭಗವಂತ ವಿಷ್ಣುವಿನ ರೂಪ ಆಮೆ ಎಂದು ನಂಬಲಾಗಿದೆ. ವಿಷ್ಣು ಸಮುದ್ರ ಮಂಥನದ ವೇಳೆ ಆಮೆ ರೂಪ ತಳೆದಿದ್ದನಂತೆ. ಹಾಗಾಗಿ ಮನೆಯಲ್ಲಿ ಆಮೆ ಮೂರ್ತಿಯಿದ್ರೆ ಲಕ್ಷ್ಮಿ ಮನೆ ಪ್ರವೇಶ ಮಾಡ್ತಾಳೆ ಎಂಬ ನಂಬಿಕೆಯಿದೆ.

ಮನೆಯಲ್ಲಿ ಆಮೆ ಮೂರ್ತಿ ಇಡುವುದ್ರಿಂದ ಧನ ವೃದ್ದಿಯಾಗುತ್ತದೆ. ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.

ಮನೆಯಲ್ಲಿ ಆಮೆ ಇಡುವುದರಿಂದ ಕುಟುಂಬಸ್ಥರ ಆಯಸ್ಸು ಹೆಚ್ಚಾಗುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆ ಕೂಡ ದೂರವಾಗುತ್ತದೆ.

ಆಮೆ ಮಂಗಳಕರ. ಹಾಗಾಗಿ ಇದು ಜೊತೆಯಲ್ಲಿದ್ದರೆ ಶಿಕ್ಷಣ, ಉದ್ಯೋಗ ಸಮಸ್ಯೆ ದೂರವಾಗುತ್ತದೆ ಎಂದು ನಂಬಲಾಗಿದೆ.

ಮನೆಯಲ್ಲಿ ಆಮೆ ಇದ್ರೆ ದುಷ್ಟ ಕಣ್ಣು ಮನೆ ಹಾಗೂ ಮನೆ ಸದಸ್ಯರ ಮೇಲೆ ಬೀಳುವುದಿಲ್ಲ.

ಹೊಸ ವ್ಯಾಪಾರ-ವ್ಯವಹಾರ ಶುರುಮಾಡಿದವರು ಕಚೇರಿಯಲ್ಲಿ ಬೆಳ್ಳಿಯ ಆಮೆ ಮೂರ್ತಿ ಇಟ್ಟಲ್ಲಿ ಶುಭವಾಗುತ್ತದೆ.

ಮನೆಯವರ ಮಧ್ಯೆ ಸುಖ-ಶಾಂತಿ, ನೆಮ್ಮದಿಗೆ ಇದು ಕಾರಣವಾಗುತ್ತದೆ.

ಮನೆಯಲ್ಲಿ ಆಮೆ ತಂದಿಟ್ಟರಾಗಲ್ಲ. ಆಮೆ ಮೂರ್ತಿ ಯಾವ ದಿಕ್ಕಿನಲ್ಲಿರಬೇಕೆಂಬುದನ್ನು ತಿಳಿದುಕೊಂಡಿರಬೇಕು. ಆಮೆ ವಿರುದ್ಧ ದಿಕ್ಕಿನಲ್ಲಿದ್ದರೆ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಹಾಗಾಗಿ ಆಮೆಯನ್ನು ಮನೆಯ ಉತ್ತರ ದಿಕ್ಕಿನಲ್ಲಿಡಬೇಕು. ಪಾತ್ರೆಯಲ್ಲಿ ನೀರನ್ನು ಹಾಕಿ ಅದ್ರಲ್ಲಿ ಆಮೆ ಇಡುವುದು ಬಹಳ ಮಂಗಳಕರ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...