ನಕಲಿ ನೋಟುಗಳು ನಮ್ಮನ್ನು ಯಾಮಾರಿಸಿ ಚಲಾವಣೆಯಾಗೋದು ಹೊಸ ವಿಚಾರವೇನಲ್ಲ. ಈಗಲೂ ಕೂಡ ಅನೇಕರು ಅವರಿಗೇ ಅರಿವಿಲ್ಲದಂತೆ ನಕಲಿ ನೋಟುಗಳನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ.
ನಿಮ್ಮ ಬಳಿ ಇರುವ 500 ರೂಪಾಯಿ ಹಣ ಅಸಲಿಯೋ ನಕಲಿಯೋ ಎಂದು ತಿಳಿದುಕೊಳ್ಳುವುದು ಹೇಗೆ..? ಇದಕ್ಕಾಗಿ ರಿಸರ್ವ್ ಬ್ಯಾಂಕ್ ನಿಮಗೆ ಒಂದಿಷ್ಟು ಮಾಹಿತಿಯನ್ನು ನೀಡಿದೆ ನೋಡಿ :
ಮಾರುಕಟ್ಟೆಯಲ್ಲಿ ನಕಲಿ ನೋಟು ಹರಿದಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆರ್ಬಿಐ ಸುತ್ತೋಲೆಯನ್ನು ಹೊರಡಿಸಿದ್ದು ಇದರಲ್ಲಿ ನಕಲಿ 500 ರೂಪಾಯಿ ನೋಟನ್ನು ಪತ್ತೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿದೆ.
1. ನಿಮ್ಮ ಬಳಿ ಇರುವ 500 ರೂಪಾಯಿ ಹಣವನ್ನು ಬೆಳಕಿನ ಮುಂದೆ ಹಿಡಿದಾಗ ನಿಮಗೆ ವಿಶೇಷವಾದ ಜಾಗಗಳಲ್ಲಿ 500 ಎಂದು ಬರೆದಿರುವುದು ಕಾಣುತ್ತದೆ.
2. ನಿಮ್ಮ ಕಣ್ಣಿನಿಂದ 45 ಡಿಗ್ರಿ ಕೋನದಲ್ಲಿ ಹಿಡಿದು ನೋಟನ್ನು ನೋಡಿದಾಗ ಕೂಡ ನಿಮಗೆ ನೋಟಿನ ವಿವಿಧ ಕಡೆಗಳಲ್ಲಿ 500 ಎಂದು ಬರೆದಿರುವುದು ಕಾಣುತ್ತದೆ.
3. ದೇವನಗರಿಯಲ್ಲಿ 500 ಎಂದು ಬರೆದಿರುವುದು ಕಾಣಬೇಕು.
4. ನೋಟಿನ ಬಲಭಾಗದಲ್ಲಿಯೂ ನಿಮಗೆ ಎಡಗಡೆ ಮುಖ ಮಾಡಿದ ಗಾಂಧಿಜಿ ಫೋಟೋ ಕಾಣಿಸಬೇಕು.
5. ನೋಟಿನ ಮೇಲೆ ಇಂಡಿಯಾ ಎಂದು ಬರೆದಿರಬೇಕು.
6.ನೀವು ನೋಟನ್ನು ಬಾಗಿಸಿದಾಗ ಸೆಕ್ಯೂರಿಟಿ ದಾರವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತಿರುವಂತೆ ಕಾಣಬೇಕು. ಹಾಗೂ ಇದರ ಮೇಲೆ ಆರ್ಬಿಐ ಎಂದು ಬರೆದಿರಬೇಕು.
7. ಗವರ್ನರ್ ಸಹಿ ಇದೆಯಾ ಇಲ್ಲವಾ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ.
8. ಮಹಾತ್ಮಾ ಗಾಂಧಿ ಹಾಗೂ 500 ಎಂದು ಬರೆದ ವಾಟರ್ ಮಾರ್ಕ್ ಇರಬೇಕು.
9. 500 ಎಂದು ಬರೆದ ಅಕ್ಷರವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುವಂತೆ ಇರಬೇಕು.
10. ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭವಿರಬೇಕು.