ನಿಮ್ಮ ಸಂಗ್ರಹದಲ್ಲಿ ಹಾಗೇ ಬಿದ್ದಿರುವ ಐದು ರೂಪಾಯಿಗಳ ನೋಟೊಂದು ನಿಮಗೆ ಸಾವಿರಾರು ರೂಪಾಯಿಗಳನ್ನು ಜೇಬಿಗೆ ಇಳಿಸಿಕೊಳ್ಳುವಂತೆ ಮಾಡಬಲ್ಲದು.
ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ: ಆರ್‌ಬಿಐ ವಿತರಿಸಿರುವ ಐದು ರೂ.ಗಳ ನೋಟು ಕೆಲವೊಂದು ಕ್ರೈಟೀರಿಯಾಗಳನ್ನು ಮ್ಯಾಚ್ ಮಾಡುತ್ತದೆ ಎಂದು ಖಾತ್ರಿ ಪಡಿಸಿಕೊಳ್ಳುವುದು. ಅಂಥ ನೋಟನ್ನು ನೀವು ಆನ್ಲೈನ್‌ನಲ್ಲಿ ಮಾರಿ 30,000 ರೂ.ಗಳನ್ನು ಸಂಪಾದಿಸಬಹುದಾಗಿದೆ.
ಈ ಡೀಲ್ ನಿಮಗೆ coinbazzar.com ಜಾಲತಾಣದಲ್ಲಿ ಲಭ್ಯವಿದೆ. ನೀವು ಖಾತ್ರಿ ಮಾಡಿಕೊಳ್ಳಬೇಕಿರುವ ಅಂಶಗಳು ಇಂತಿವೆ:
* ನೋಟಿನ ಮೇಲೆ ಟ್ರಾಕ್ಟರ್ ಚಿತ್ರ ಇರಬೇಕು.
* ನೋಟಿನ ಮೇಲೆ 786 ಬರೆದಿದ್ದಲ್ಲಿ ಅದನ್ನು ಅತ್ಯಪರೂಪದ ನೋಟೆಂದು ಪರಿಗಣಿಸಲಾಗುವುದು.
ಮೇಲ್ಕಂಡ ಜಾಲತಾಣಕ್ಕೆ ಭೇಟಿ ಕೊಟ್ಟು, ಮಾರಾಟಗಾರನಾಗಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಿ. ನಿಮ್ಮ ಬಳಿ ಇರುವ ನೋಟಿನ ಚಿತ್ರವನ್ನು ಕ್ಲಿಕ್ ಮಾಡಿ ಅದನ್ನು ಪ್ಲಾಟ್‌ಫಾರಂನಲ್ಲಿ ಅಪ್ಲೋಡ್ ಮಾಡಿ.
ಒಮ್ಮೆ ನಿಮ್ಮ ಜಾಹೀರಾತು ಪ್ಲಾಟ್‌ಫಾರಂನಲ್ಲಿ ಫೀಚರ್ ಆದಲ್ಲಿ, ಆಸಕ್ತರು ನಿಮಗೆ ಕರೆ ಮಾಡಲಿದ್ದಾರೆ. ಇದಾದ ಬಳಿಕ ನೀವು ಡೀಲ್‌ಗೆ ಮುಂದಾಗಬಹುದು.
ಇದಕ್ಕೂ ಮುನ್ನ ವಿತ್ತ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್.ಎಂ. ಪಟೇಲ್ ಸಹಿ ಇರುವ, 123456 ಎಂದು ಸರಣಿ ಸಂಖ್ಯೆ ಇರುವ ಒಂದು ರೂಪಾಯಿ ಮುಖಬೆಲೆಯ ನೋಟೊಂದು 45,000 ರೂಪಾಯಿಗಳನ್ನು ಸಂಪಾದಿಸುವ ಸಾಧ್ಯತೆ ಸೃಷ್ಟಿಸಿತ್ತು.
ಇದೇ coinbazzar.com ಜಾಲತಾಣಕ್ಕೆ ಭೇಟಿ ಕೊಟ್ಟು ಆ ಒಂದು ರೂಪಾಯಿ ನೋಟನ್ನು ಮಾರಾಟ ಮಾಡಬಹುದಾಗಿದೆ.