ನಿಮ್ಮ ಪರ್ಸ್ನ ಮೂಲೆಯಲ್ಲಿ ಎಲ್ಲಾದರೂ ಹಳೆಯ ಒಂದು ರೂಪಾಯಿ ನೋಟು ಇದ್ದರೆ ನೀವು ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಬಹುದಾಗಿದೆ. ಹೌದು..! ಹಳೆಯ ಒಂದು ರೂಪಾಯಿ ನೋಟು ನಿಮ್ಮ ಭಾಗ್ಯದ ಬಾಗಿಲನ್ನು ತೆರೆಯುವ ಸಾಮರ್ಥ್ಯವನ್ನು ಹೊಂದಿದೆ.
1 ರೂಪಾಯಿಯಿಂದ ಲಕ್ಷಾಧಿಪತಿಯಾಗಬೇಕು ಎಂದುಕೊಂಡಿದ್ದರೆ ನಿಮ್ಮ ಬಳಿ ಇರುವ ಒಂದು ರೂಪಾಯಿ ನೋಟಿನಲ್ಲಿ ಕೆಲವು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕು. ಈ ನೋಟು 7 ಲಕ್ಷ ರೂಪಾಯಿಗೆ ಹರಾಜಾಗಿದೆ. ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ ಮಾಡುವಂತಹ ವೆಬ್ಸೈಟ್ಗಳಲ್ಲಿ ನೀವು ಈ ನೋಟುಗಳನ್ನು ಮಾರಾಟ ಮಾಡಬಹುದಾಗಿದೆ.
ʼಕಚಾ ಬಾದಾಮ್ʼ ಸೃಷ್ಟಿಸಿದ ಸೆನ್ಸೇಷನ್ ಬಳಿಕ ಸಂಗೀತದತ್ತ ಒಲವು ತೋರಿದ ಕಡಲೆಕಾಯಿ ಮಾರಾಟಗಾರ..!
ಈ ನಿರ್ದಿಷ್ಟ ಒಂದು ರೂಪಾಯಿ ನೋಟು ಸ್ವಾತಂತ್ರ್ಯ ಪೂರ್ವದ್ದಾಗಿರಬೇಕು. ಕರೆನ್ಸಿ ನೋಟು 1935ರಲ್ಲಿ ಬ್ರಿಟಿಷ್ ಇಂಡಿಯಾದಿಂದ ಪ್ರಕಟಿಸಲ್ಪಟ್ಟಿತ್ತು. ಆಗಿನ ಗವರ್ನರ್ ಜೆಡಬ್ಲೂ ಕೆಲ್ಲಿ ಅವರ ಸಹಿ ಹೊಂದಿರುವ ಏಕೈಕ ನೋಟು ಇದಾಗಿದೆ. ಇದು ಬರೋಬ್ಬರಿ 80 ವರ್ಷಗಳ ಹಿಂದಿನ ಹಳೆಯ ಕರೆನ್ಸಿ ನೋಟಾಗಿದೆ.
ಇಂತಹ ನೋಟುಗಳನ್ನು ಮಾರಾಟ ಮಾಡಲು ನೀವು ಕ್ವಿಕರ್, ಓಎಲ್ಕ್ಸ್ ಅಥವಾ ಇಬೇ ವೆಬ್ಸೈಟ್ಗಳಿಗೆ ಭೇಟಿ ನೀಡಬಹುದಾಗಿದೆ.
ನಿಮ್ಮ ಬಳಿ ಇರುವ ನೋಟಿನ ಸ್ಪಷ್ಟ ಫೋಟೋವನ್ನು ಕ್ಲಿಕ್ಕಿಸಿ.
ಖಾಸಗಿ ಉದ್ಯೋಗದಲ್ಲಿ ಹರಿಯಾಣ ನಾಗರಿಕರಿಗೆ ಶೇ.75ರಷ್ಟು ಮೀಸಲು; ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
ಇದನ್ನು ಇ ಬೇ, ಕ್ವಿಕ್ಕರ್ ಅಥವಾ ಒಎಲ್ಎಕ್ಸ್ನಲ್ಲಿ ಅಪ್ಲೋಡ್ ಮಾಡಿ.
ಕಂಪನಿಯು ನಿಮ್ಮ ನೋಟನ್ನು ಪ್ರಚಾರ ಮಾಡುತ್ತದೆ.
ಹಳೆಯ ನೋಟುಗಳನ್ನು ಸಂಗ್ರಹಿಸಲು ಇಚ್ಛಿಸುವವರು ನಿಮ್ಮ ನೋಟುಗಳನ್ನು ಖರೀದಿಸಲು ಮುಂದಾಗುತ್ತಾರೆ.