ಪ್ರತಿಯೊಬ್ಬ ಮನುಷ್ಯನೊಳಗಿನ ಶಕ್ತಿ ಆತನ ಪ್ರಭಾವಳಿಯನ್ನೂ ಅವಲಂಭಿಸಿರುತ್ತದೆ. ಪ್ರಭಾವಳಿ ಅಥವಾ ಆರಾ ಎಂದರೆ ಮನುಷ್ಯನ ಸುತ್ತಲಿರುವ ಎನರ್ಜಿ ಫೀಲ್ಡ್. ಪ್ರಭಾವಳಿ ಶಕ್ತಿಯುತವಾಗಿದ್ದಷ್ಟು ಮನುಷ್ಯ ಅದ್ವಿತೀಯ ಸಾಧನೆಗಳನ್ನು ಮಾಡಬಹುದು ಎನ್ನಲಾಗುತ್ತದೆ. ಕೆಲವೊಮ್ಮೆ ಈ ಪ್ರಭಾವಳಿ ನೆಗೆಟೀವ್ ಮನಸ್ಥಿತಿಯ ಜನರು, ಋಣಾತ್ಮಕ ಪರಿಸ್ಥಿತಿಗಳ ನಡುವೆ ಒಟನಾಡ ನಡೆಸಿದಾಗ ಶಕ್ತಿ ಕುಂದುತ್ತದೆ. ಈ ಹಿನ್ನೆಲೆಯಲ್ಲಿ ಆಗಾಗ ನಮ್ಮ ಪ್ರಭಾವಳಿಯನ್ನು ಕ್ಲೆನ್ಸ್ ಮಾಡಿಕೊಳ್ಳುತ್ತಲೇ ಇರಬೇಕು. ಹಾಗಾದರೆ ಪ್ರಭಾವಳಿಯನ್ನು ಕ್ಲೆನ್ಸ್ ಮಾಡುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ.
ಸ್ನಾನ : ಉಪ್ಪು, ಮೂಲಿಕೆ ಮತ್ತು ಎಸೆನ್ಷಿಯಲ್ ಆಯಿಲ್ ಸೇರಿಸಿದ ನೀರಿನಿಂದ ಸ್ನಾನ ಮಾಡುವುದು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಸ್ನಾನದ ನಂತರ ನಮಗೆ ಚೈತನ್ಯ ಉಂಟಾಗುವುದು ಇದೇ ಕಾರಣಕ್ಕೆ. ಲ್ಯಾವೆಂಡರ್ ಎಣ್ಣೆ, ಶ್ರೀಗಂಧ ಮತ್ತು ಹಿಮಾಲಯನ್ ಸಾಲ್ಟ್ ಇದಕ್ಕೆ ಬಳಸಬಹುದು.
ಮೂಲಿಕೆ, ಧೂಪದ ನಡುವೆ ಕೂರುವುದು : ಮನೆಯಲ್ಲಿ ಮೂಲಿಕೆಭರಿತ ಊದುಗಡ್ಡಿ ಇಲ್ಲವೇ ಸಾಂಬ್ರಾಣಿ ಧೂಪ ಹಾಕುವುದು ಉತ್ತಮ. ಇವುಗಳ ನಡುವೆ ಕೆಲವು ಹೊತ್ತು ಕಳೆದಾಗ ನಮ್ಮ ಆರಾ ಕ್ಲೆನ್ಸ್ ಆಗುವುದಲ್ಲದೇ ಶಕ್ತಿ ಹೆಚ್ಚಾಗುತ್ತದೆ.
ಸಮುದ್ರ ಸ್ನಾನ ಅಥವಾ ನದಿ ಸ್ನಾನ : ನಿಮ್ಮೊಳಗಿನ ನೆಗೆಟಿವಿಟಿ ಹೋಗಲು, ನಿಮ್ಮ ಪ್ರಭಾವಳಿ ಶಕ್ತಿಯುತವಾಗಲು ಸಮುದ್ರ ಸ್ನಾನ ಇಲ್ಲವೇ ನದಿ ನೀರಿನ ಸ್ನಾನ ಪ್ರಯೋಜನಕಾರಿ. ಇದರಿಂದ ನಿಮ್ಮ ಪ್ರಭಾವಳಿಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ.
ಧ್ಯಾನ : ಧ್ಯಾನ ಮಾಡುವಾಗ ನೀವು ನಿಮ್ಮ ಮೈಂಡ್ಗೆ ಕಮ್ಯಾಂಡ್ ಕೊಡಬೇಕು. ನಿಮ್ಮ ಪ್ರಭಾವಳಿ ಕ್ಲೆನ್ಸ್ ಆಗುತ್ತಿದೆ, ಶುದ್ಧವಾಗುತ್ತಿದೆ ಎಂದು ಹೇಳುವ ಮೂಲಕ ಸಕಾರಾತ್ಮಕತೆಯನ್ನು ದ್ವಿಗುಣ ಮಾಡಿಕೊಳ್ಳಬಹುದು.
ಮಂತ್ರ ಪಠಣ ಅಥವಾ ಅಫರ್ಮೇಷನ್ಸ್ : ದೇವರ ನಾಮ ಸ್ಮರಣೆಯೂ ಕೂಡ ಪ್ರಭಾವಳಿ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನಲಾಗುತ್ತದೆ. ಜೊತೆಗೆ ನಿಮಗೆ ನೀವು ಒಳ್ಳೆಯದನ್ನೇ ಹೇಳಿಕೊಳ್ಳಿ ಇದನ್ನು ಅಫರ್ಮೇಷನ್ಸ್ ಎಂದು ಹೇಳಲಾಗುತ್ತದೆ. ಆ ಮೂಲಕ ನಿಮ್ಮ ಪ್ರಭಾವಳಿ ಸ್ಟ್ರಾಂಗ್ ಆಗುವುದಲ್ಲದೇ ನೆಮ್ಮದಿಯ ಬದುಕು ಕಾಣಬಹುದು.