ಚರ್ಮದಲ್ಲಿ ಹಲವು ವಿಧಗಳಿಗೆ. ನೀವು ಯಾವ ವಿಧದ ಚರ್ಮವನ್ನು ಹೊಂದಿದ್ದೀರಾ ಎಂದು ತಿಳಿದುಕೊಂಡು ಅದರಂತೆ ಮುಖಕ್ಕೆ ಕ್ರೀಂ, ಫೇಸ್ ಪ್ಯಾಕ್ ಗಳನ್ನು ಬಳಸಬೇಕು. ಇಲ್ಲವಾದರೆ ನಿಮ್ಮ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು ಮೂಡುವುದರ ಮೂಲಕ ಮುಖದ ಚರ್ಮ ಕೆಡುತ್ತದೆ. ಹಾಗಾಗಿ ಈ ಮೂಲಕ ನಿಮ್ಮ ಚರ್ಮ ಯಾವ ವಿಧವಾಗಿದ್ದು ಎಂಬುದನ್ನು ತಿಳಿದುಕೊಳ್ಳಿ.
*ಸಾಮಾನ್ಯ ಚರ್ಮ : ಈ ಚರ್ಮದಲ್ಲಿ ಎಣ್ಣೆಯಂಶ ಕಾಣಿಸುಕೊಳ್ಳುವುದಿಲ್ಲ. ಇದು ಸ್ವಚ್ಚ ಹಾಗೂ ಮೃದುವಾಗಿ ಕಾಣುತ್ತದೆ. ಉತ್ತಮ ರಕ್ತಪರಿಚಲನೆ ಮತ್ತು ಆರೋಗ್ಯಕರವಾದ ಬಣ್ಣವನ್ನು ಹೊಂದಿರುತ್ತದೆ.
*ಒಣ ಚರ್ಮ : ನಿಮ್ಮ ಚರ್ಮವು ಒಣಗಿರುತ್ತದೆ, ಕ್ಲೀನ್ ಆಗಿರುತ್ತದೆ ಮತ್ತು ಬಿಗಿಯಾಗಿರುತ್ತದೆ. ಇದು ಅಕಾಲಿಕ ವಯಸ್ಸಾಗುವಿಕೆಗೆ ಒಳಗಾಗುತ್ತದೆ. ಚರ್ಮದಲ್ಲಿ ಬಿರುಕುಗಳು, ಗೆರೆಗಳು ಮೂಡಿರುತ್ತದೆ.
*ಎಣ್ಣೆಯುಕ್ತ ಚರ್ಮ : ಈ ಚರ್ಮವು ಯಾವಾಗಲೂ ಎಣ್ಣೆಯಂಶದಿಂದ ಕೂಡಿರುತ್ತದೆ. ಮುಖದ ಎಲ್ಲಾ ಭಾಗಗಳಲ್ಲಿ ಎಣ್ಣೆಯಂಶವಿರುತ್ತದೆ. ಇದು ಬಹಳಷ್ಟು ಸಮಸ್ಯೆಗಳನ್ನುಂಟು ಮಾಡುತ್ತದೆ. ಮೊಡವೆ, ಗುಳ್ಳೆಗಳು ಮೂಡಿರುತ್ತದೆ.
* ಒಣ ಮತ್ತು ಎಣ್ಣೆ ಮಿಶ್ರಿತ ಚರ್ಮ : ಈ ಚರ್ಮ ಹೊಂದಿರುವವರು ಮೂಗು, ಹಣೆ ಕೆಲವಡೆಯಲ್ಲಿ ಎಣ್ಣೆಯಂಶವಿದ್ದರೆ. ಇನ್ನೂ ಕೆಲವು ಕಡೆ ಒಣಗಿರುತ್ತದೆ.
*ಸೂಕ್ಷ್ಮ ತ್ವಚೆ : ಈ ತ್ವಚೆ ತುಂಬಾ ಕೋಮಲವಾಗಿರುತ್ತದೆ. ಮುಟ್ಟಿದ ಕಡೆಯಲ್ಲಿ ಕೆಂಪಾಗುತ್ತದೆ, ಸ್ಕಿನ್ ಅಲರ್ಜಿಗೆ ಒಳಗಾಗುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡಬೇಕು ಇಲ್ಲವಾದರೆ ಸಮಸ್ಯೆಗೆ ಒಳಗಾಗುತ್ತದೆ.