ತೀಕ್ಷ್ಣವಾದ ಕಣ್ಣಿನ ದೃಷ್ಟಿ ನಿಮ್ಮದಾಗಬೇಕೆಂದರೆ ಹೀಗೆ ಮಾಡಿ
ಕರಿಬೇವನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ.
ನಿತ್ಯ ಪುದೀನಾ ಸೊಪ್ಪಿನ ಕಷಾಯ ಮಾಡಿ ಕುಡಿಯುವುದರಿಂದ, ನುಗ್ಗೆ ಸೊಪ್ಪಿನ ಪಲ್ಯ ತಿನ್ನುವುದರಿಂದ, ಒಂದೆಲಗ ಸೊಪ್ಪು ಕಷಾಯ ಮಾಡಿ ಕುಡಿಯುವುದರಿಂದ ಕಣ್ಣಿನ ದೃಷ್ಟಿ ಶಕ್ತಿ ಹೆಚ್ಚುತ್ತದೆ.
ವೀಳ್ಯದೆಲೆಯ ತೊಟ್ಟು ತೆಗೆದು ಕಷಾಯ ಮಾಡಿಕೊಂಡು ಕುಡಿಯಿರಿ. 4 ರಿಂದ 5 ಸೀಬೆ ಎಲೆಗಳನ್ನು ನೀರಿಗೆ ಹಾಕಿ ಕಷಾಯ ಮಾಡಿಕೊಂಡು ಕುಡಿಯಿರಿ. ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಇವುಗಳಲ್ಲಿ ಯಾವುದಾದರೂ 4 ಕಷಾಯಗಳನ್ನು ವಾರಕ್ಕೊಂದರಂತೆ ಕುಡಿಯುತ್ತಾ ಬನ್ನಿ.
ಕ್ಯಾರೆಟ್, ಟೊಮೊಟೊ, ಸೌತೆಕಾಯಿ, ಬಿಟ್ ರೂಟ್ ಅನ್ನು ಸಣ್ಣಗೆ ಕತ್ತರಿಸಿ, ಮಿಕ್ಸಿ ಮಾಡಿ ನೀರು ಹಾಕದೆ ಸೋಸಿಕೊಳ್ಳಿ. ಇದಕ್ಕೆ ಅರ್ಧ ಚಮಚ ನಿಂಬೆರಸ ಒಂದು ಚಮಚ ಜೇನುತುಪ್ಪ ಬೆರೆಸಿ. ಬೆಳಿಗ್ಗೆ ತಿಂಡಿಗಿಂತ ಒಂದು ಗಂಟೆ ಮುಂಚೆ ಮೊದಲೇ ಕುಡಿಯಿರಿ. ಇದರಿಂದ ಕಣ್ಣಿನ ದೃಷ್ಟಿ ತೀಕ್ಷ್ಣ ವಾಗುತ್ತದೆ.