alex Certify ನಿಮ್ಮ ಈ 3 ಅಭ್ಯಾಸಗಳಿಂದಾಗಿ ಆಗಬಹುದು ಬ್ರೇಕಪ್‌, ಕೂಡಲೇ ಅದನ್ನು ಬದಲಾಯಿಸಿಕೊಳ್ಳಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಈ 3 ಅಭ್ಯಾಸಗಳಿಂದಾಗಿ ಆಗಬಹುದು ಬ್ರೇಕಪ್‌, ಕೂಡಲೇ ಅದನ್ನು ಬದಲಾಯಿಸಿಕೊಳ್ಳಿ…!

ಇತ್ತೀಚಿನ ದಿನಗಳಲ್ಲಿ ಪ್ರೇಮ ಸಂಬಂಧ ಅಥವಾ ಮದುವೆ ಹೆಚ್ಚು ಕಾಲು ಉಳಿಯುವುದೇ ಅಪರೂಪ ಎಂಬಂತಾಗಿದೆ. ಬ್ರೇಕಪ್‌, ಡೈವೋರ್ಸ್‌ ಕಾಮನ್‌ ಆಗಿಬಿಟ್ಟಿದೆ. ಪ್ರಮುಖವಾಗಿ ಮೂರು ತಪ್ಪುಗಳು ಈ ರೀತಿ ಸಂಬಂಧ ಹಳಸಲು ಕಾರಣವಾಗುತ್ತವೆ.‌

ಅವನ್ನು ಪರಸ್ಪರ ಅರ್ಥಮಾಡಿಕೊಂಡರೆ ಸಂಬಂಧ ಚಿರಕಾಲ ಉಳಿಯುತ್ತದೆ. ಸಂಬಂಧವನ್ನು ಕಾಪಾಡಿಕೊಳ್ಳುವುದು ಬಹಳ ಕಠಿಣವಾದ ಕೆಲಸ. ನಿಮ್ಮ ಸಣ್ಣ ತಪ್ಪಿನಿಂದಾಗಿ ಸಂಗಾತಿ ನಿಮ್ಮನ್ನು ಬಿಟ್ಟು ಹೋಗಬಹುದು. ಅನೇಕ ಜನರು ತಮ್ಮ ಸಂಗಾತಿ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಇದರಿಂದಾಗಿಯೂ ಬ್ರೇಕಪ್‌ ಆಗುವ ಸಾಧ್ಯತೆ ಇರುತ್ತದೆ.

ಸಂಗಾತಿಯನ್ನು ಸ್ನೇಹಿತೆಯಂತೆ ನೋಡಿಕೊಳ್ಳಿ

ಕೆಲವರು ತಮ್ಮ ಹೆಂಡತಿ ಅಥವಾ ಗೆಳತಿಯೊಂದಿಗೆ ಮನಬಿಚ್ಚಿ ಮಾತನಾಡುವುದಿಲ್ಲ. ಸ್ನೇಹಿತರೊಂದಿಗೆ ಇರುವಷ್ಟು ಸಲುಗೆಯಿಂದ ಇರುವುದಿಲ್ಲ. ಯಾವಾಗಲೂ ಅಲರ್ಟ್‌ ಆಗಿಯೇ ಇರುವದು, ಮನದಾಳದ ಮಾತುಗಳನ್ನು ಹಂಚಿಕೊಳ್ಳದೇ ಇರುವುದು, ಕಾಳಜಿ ವಹಿಸದೇ ಇರುವುದು ಈ ರೀತಿಯ ವರ್ತನೆಗಳಿಂದ ಆಕೆಗೂ ಬೇಸರವಾಗುತ್ತದೆ. ಇದೇ ಕಾರಣಕ್ಕೆ ನಿಮ್ಮ ನಡುವಿನ ಸಂಬಂಧ ಹಳಸಬಹುದು. ಅದಕ್ಕಾಗಿಯೇ ನೀವು ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸಬಾರದು ಮತ್ತು ಅವರನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕು. ಸಂಗಾತಿ ಬಗ್ಗೆ ವಿಶೇಷ ಗಮನಕೊಡಿ. ಕೆಲವರು ಸ್ನೇಹಿತರ ವಲಯದಲ್ಲಿ ಮೈಮರೆತು ಸಂಗಾತಿಯ ಬಗ್ಗೆ ಗಮನ ಹರಿಸುವುದಿಲ್ಲ.

ಇತರರನ್ನು ಅವಲಂಬಿಸಬೇಡಿ

ಕಾಲಕ್ಕೆ ತಕ್ಕಂತೆ ಎಲ್ಲರೂ ಬದಲಾಗಬೇಕು. ಎಲ್ಲಾ ಕೆಲಸಗಳನ್ನು ತಮ್ಮ ಗೆಳತಿ ಅಥವಾ ಸಂಗಾತಿ ಮಾಡಬೇಕೆಂದು ನಿರೀಕ್ಷಿಸುವ ಅನೇಕ ಹುಡುಗರಿದ್ದಾರೆ. ಈ ವಿಷಯದಲ್ಲಿ ನೀವು ಆಧುನಿಕರಾಗಿರಬೇಕು. ಸಣ್ಣಪುಟ್ಟ ಕೆಲಸಗಳಿಗೆ ನಿಮ್ಮ ಗೆಳತಿಯ ಮೇಲೆ ಅವಲಂಬಿತರಾಗಬೇಡಿ. ನಿಮ್ಮ ಸಂಗಾತಿಗೆ ನೀವು ಪ್ರತಿಯೊಂದು ಕೆಲಸವನ್ನು ನೀಡಿದರೆ, ಸ್ವಲ್ಪ ಸಮಯದ ನಂತರ ಅವಳು ನಿಮ್ಮನ್ನು ಇಷ್ಟಪಡದಿರಲು ಪ್ರಾರಂಭಿಸುತ್ತಾಳೆ. ಇದೇ ಕಾರಣಕ್ಕೆ ನಿಮ್ಮಿಂದ ದೂರವಾಗಬಹುದು.

ಗೌರವ ನೀಡುವುದು ಬಹಳ ಮುಖ್ಯ ಅನೇಕ ಹುಡುಗರು ತಮ್ಮ ಸಂಗಾತಿ ಅಥವಾ ಪ್ರಿಯತಮೆಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಆಕೆಯೊಂದಿಗೆ ಚೆನ್ನಾಗಿ ವರ್ತಿಸುವುದಿಲ್ಲ. ಇತರರ ಮುಂದೆ ಕೋಪ ಮಾಡಿಕೊಳ್ಳುವುದು, ಬೈಯ್ಯುವುದು ಇಂತಹ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಹೀಗೆ ಮಾಡಿದರೆ ಗೆಳತಿ ಬ್ರೇಕ್ ಅಪ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ನಿಮ್ಮ ಸಂಬಂಧ ಮುರಿದು ಬೀಳಬಹುದು. ಅದಕ್ಕಾಗಿಯೇ ನಿಮ್ಮ ಸಂಗಾತಿಗೆ ಯಾವಾಗಲೂ ಗೌರವ ನೀಡಿ. ಆಗ ಗೆಳತಿ ಕೂಡ ಯಾವಾಗಲೂ ನಿಮ್ಮನ್ನು ಬೆಂಬಲಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...