alex Certify ನಿಮಗೆ ಗೊತ್ತಾ ? ಮಾರಕ ಕಾಯಿಲೆ ಬರದಂತೆ ತಡೆಯಬಲ್ಲದು ಬಿಳಿ ಈರುಳ್ಳಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಗೊತ್ತಾ ? ಮಾರಕ ಕಾಯಿಲೆ ಬರದಂತೆ ತಡೆಯಬಲ್ಲದು ಬಿಳಿ ಈರುಳ್ಳಿ…!

ಈರುಳ್ಳಿ ಪ್ರತಿಯೊಬ್ಬರ ಅಡುಗೆ ಮನೆಯ ಸಂಗಾತಿ. ಈರುಳ್ಳಿ ಇಲ್ಲದೇ ಅಡುಗೆ ಮಾಡುವವರೇ ಅಪರೂಪ. ಪ್ರತಿನಿತ್ಯ ನಾವಿದನ್ನು ಬಳಸುತ್ತೇವೆ. ಕೇವಲ ತಿನಿಸುಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಈರುಳ್ಳಿಯಿಂದ ಆರೋಗ್ಯಕ್ಕೂ ಸಾಕಷ್ಟು ಅನುಕೂಲಗಳಿವೆ.

ಇದು ಅನೇಕ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅದರಲ್ಲೂ ಬಿಳಿ ಈರುಳ್ಳಿಯಲ್ಲಿ ಡಬಲ್‌ ಪ್ರಯೋಜನಗಳಿವೆ. ಬಿಳಿ ಈರುಳ್ಳಿಯ ಇಳುವರಿ ಸಾಮಾನ್ಯ ಈರುಳ್ಳಿಗಿಂತ ತುಂಬಾ ಕಡಿಮೆ. ಆದ್ದರಿಂದ ಇದು ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಸಿಗುವುದಿಲ್ಲ.

ಮಧುಮೇಹ: ಮಧುಮೇಹ ರೋಗಿಗಳಿಗೆ ಬಿಳಿ ಈರುಳ್ಳಿ ಔಷಧವಿದ್ದಂತೆ. ಇದನ್ನು ನಿಯಮಿತವಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ಕ್ಯಾನ್ಸರ್: ಕ್ಯಾನ್ಸರ್ ಬಹಳ ಗಂಭೀರವಾದ ಕಾಯಿಲೆ. ಇದನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡದಿದ್ದರೆ ಮಾರಣಾಂತಿಕವಾಗುತ್ತದೆ. ಇದನ್ನು ತಡೆಗಟ್ಟಲು ಬಿಳಿ ಈರುಳ್ಳಿ ತಿನ್ನಬೇಕು. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ ಫ್ಲೇವನಾಯ್ಡ್ ಎಂಟಿಒಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ. ನೀವು ಈರುಳ್ಳಿಯನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು.

ಜೀರ್ಣಕ್ರಿಯೆ: ಬಿಳಿ ಈರುಳ್ಳಿಯನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಇದನ್ನು ಸಲಾಡ್‌ಗಳಲ್ಲಿ ಸೇರಿಸಲಾಗುತ್ತದೆ. ಬಿಳಿ ಈರುಳ್ಳಿಯಲ್ಲಿ ನಮ್ಮ ಹೊಟ್ಟೆಗೆ ಪ್ರಯೋಜನಕಾರಿಯಾದ ಫೈಬರ್ ಮತ್ತು ಪ್ರಿಬಯಾಟಿಕ್‌ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅವು ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ರೋಗ ನಿರೋಧಕ ಶಕ್ತಿ: ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಅನೇಕ ರೀತಿಯ ಸೋಂಕುಗಳಿಂದ ಪಾರಾಗಬಹುದು. ಬಿಳಿ ಈರುಳ್ಳಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.  ಆದ್ದರಿಂದ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...