ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಹಲವರಲ್ಲಿರುತ್ತದೆ. ತಮ್ಮ ಕೋಪ, ಅಸಮಾಧಾನ, ಬೇಸರವನ್ನೆಲ್ಲ ನಿದ್ದೆಯಲ್ಲಿ ಹೊರಹಾಕುವವರೂ ಇದ್ದಾರೆ. ವಿಶೇಷ ಅಂದ್ರೆ ನಿದ್ದೆಗಣ್ಣಲ್ಲಿ ಯಾರಿಗಾದ್ರೂ ಬೈಯ್ಯುವ ಸಂದರ್ಭದಲ್ಲಿ ಕೂಡ ಜನರು ವ್ಯಾಕರಣ ದೋಷವಿಲ್ಲದಂತೆ ಮಾತನಾಡ್ತಾರಂತೆ.
ಸ್ಲೀಪ್ ಹೆಸರಿನ ಪತ್ರಿಕೆಯೊಂದರಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ನಿದ್ದೆಯಲ್ಲಿ ಮಾತನಾಡುವ ಅಭ್ಯಾಸವಿರೋ 232 ಜನರನ್ನು ಸಂಶೋಧನೆಗೆ ಒಳಪಡಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಫ್ರಾನ್ಸ್ ವಿಜ್ಞಾನಿಗಳು ಈ ಸಂಶೋಧನೆಯ ನೇತೃತ್ವ ವಹಿಸಿದ್ದರು.
ಎಚ್ಚರವಾಗಿದ್ದಾಗ ಮಾತನಾಡಿದ ರೀತಿಯಲ್ಲೇ, ಒಂದೂ ವ್ಯಾಕರಣ ದೋಷವಿಲ್ಲದಂತೆ ನಿದ್ದೆಗಣ್ಣಲ್ಲಿ ಕೂಡ ಜನರು ಬೈಗುಳ ಹೊರಹಾಕುತ್ತಾರೆ. ಮಹಿಳೆಯರಿಗಿಂತ್ಲೂ ಹೆಚ್ಚಾಗಿ ನಿದ್ದೆಯಲ್ಲಿ ಬೈಯ್ಯುವ ಅಭ್ಯಾಸ ಪುರುಷರಲ್ಲಿ ಹೆಚ್ಚಾಗಿದೆ. ನೋ ಎಂಬ ಪದವನ್ನು ನಿದ್ದೆಯಲ್ಲಿ ಮಾತನಾಡುವ ಅಭ್ಯಾಸವಿರುವವರು ಅತಿ ಹೆಚ್ಚಾಗಿ ಬಳಸಿದ್ದಾರೆ.