ದೂರದ ಊರಿಗೆ ಪ್ರಯಾಣ ಮಾಡುವುದು ಅಥವಾ ರಾತ್ರಿ ವೇಳೆ ಪ್ರಯಾಣ ಮಾಡುವುದು ಅಂದರೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕೂಡ ಕಡಿಮೆಯೇ.
ಆಯಾಸವಾಯ್ತು ಅಂತಾ ಕೊಂಚ ಕಣ್ಣು ನಿದ್ದೆಗೆ ಜಾರಿದರೂ ಸಹ ಮಾರಣಾಂತಿಕ ಅಪಘಾತಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಡ್ರೈವಿಂಗ್ ಮಾಡುವಾಗ ನಿದ್ದೆಗೆ ಜಾರುವವರ ವಿರುದ್ಧ ಚಾಲಕರನ್ನು ಎಚ್ಚರಿಸಲು ನಾಗ್ಪುರದ ವ್ಯಕ್ತಿಯು ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವನ್ನು ಧರಿಸಿದ ವ್ಯಕ್ತಿಯು ಚಾಲನೆ ಮಾಡುವಾಗ ನಿದ್ದೆಗೆ ಜಾರಿದರೆ ಚಾಲಕನನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತದೆ.
ಅನೇಕ ಕಾರು ತಯಾರಕರು ಕೂಡ ತಮ್ಮ ಕಾರುಗಳಲ್ಲಿ ಸ್ಲೀಪ್ ಅಲರ್ಟ್ ಸಿಸ್ಟಂನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಈ ವೈಶಿಷ್ಟ್ಯವು ಕೆಲವೇ ವಾಹನಗಳಲ್ಲಿ ಮಾತ್ರ ಲಭ್ಯವಿದೆ.
ನಾಗ್ಪುರ ಮೂಲದ ಚಾಲಕರೊಬ್ಬರು ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದು ಇದು ಚಾಲಕರು ನಿದ್ದೆಗೆ ಜಾರುತ್ತಿದ್ದಂತೆಯೇ ವೈಬ್ರೇಷನ್ ಮಾಡುತ್ತಾ ಅಲಾರಂ ಸೌಂಡ್ ಮಾಡುವ ಮೂಲಕ ಚಾಲಕರನ್ನು ಎಚ್ಚರಿಸುತ್ತದೆ.
ಈ ಸಾಧನವು 3.6 ವೋಲ್ಟ್ ಬ್ಯಾಟರಿ ಹಾಗೂ ಆನ್ & ಆಫ್ ಸ್ವಿಚ್ನ್ನು ಹೊಂದಿದೆ. ಚಾಲಕರು ವಾಹನ ಚಾಲನೆ ಮಾಡುವಾಗ ಕಿವಿಯ ಹಿಂದೆ ಧರಿಸಲಾಗುತ್ತದೆ.
ಚಾಲಕನ ತಲೆಯು ಸ್ಟೀರಿಂಗ್ ಕಡೆಗೆ 30 ಡಿಗ್ರಿಯಷ್ಟು ವಾಲಿದಾಗ ಸಾಧನೆಯು ಎಚ್ಚರಿಕೆಯನ್ನು ನೀಡುತ್ತದೆ.
ಗೌರವ್ ಸವ್ವಲಾಖೆ ಎಂಬ ಚಾಲಕ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಕೆಲ ಸಮಯದ ಹಿಂದೆ ಗೌರವ್ ರಾತ್ರಿ ವೇಳೆ ವಾಹನ ಚಾಲನೆ ಮಾಡುತ್ತಿದ್ದಾಗ ನಿದ್ದೆಗೆ ಜಾರಿದ್ದಾರೆ. ಈ ಸಂದರ್ಭದಲ್ಲಿ ಇನ್ನೇನು ಅವರು ಮಾರಣಾಂತಿಕ ಅಪಘಾತಕ್ಕೀಡಾಗುವುದರಲ್ಲಿದ್ದರು.
ಆದರೆ ಅದೃಷ್ಟವಶಾತ್ ಪಾರಾಗಿದ್ದರು. ಇದಾದ ಬಳಿಕ ಅವರು ಸಾಧನವನ್ನು ಕಂಡು ಹಿಡಿಯುವ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದಾರೆ.