ಯಾವುದೇ ವ್ಯಕ್ತಿ ತಾನು ಪ್ರೀತಿಸಲು ಅಥವಾ ಮದುವೆಯಾಗಲು ವಯಸ್ಸಿನ ಮಿತಿ ಇದೆಯೇ? ಸಂಪ್ರದಾಯಗಳ ಮೂಲಕ ಹೋಗುವುದೆಂದರೆ, ಬಹುಶಃ ಸಾಮಾಜಿಕ ರೂಢಿಗಳಿಗೆ ಅನುಗುಣವಾಗಿ ಇರುತ್ತವೆ. ಹಾಗಂತ ವೃದ್ಧಾಪ್ಯದಲ್ಲಿ ಮದುವೆಯಾದ್ರೆ ಜನ ಮುಸಿ ಮುಸಿ ನಗ್ತಾರೆ. ಹಾಗಂತ ಅದು ನಾವು ಮಾಡಿಕೊಂಡಿರುವ ಕಟ್ಟುಪಾಡಾಗಿದೆ. ಇದೀಗ 95 ವರ್ಷದ ವ್ಯಕ್ತಿಯೊಬ್ಬರಿಗೆ ಮಹಿಳೆಯೊಬ್ಬಳ ಮೇಲೆ ಮೊದಲ ಬಾರಿ ಪ್ರೀತಿ ಮೊಳಕೆಯೊಡೆದಿದೆ. ಈ ಇಂಟ್ರೆಸ್ಟಿಂಗ್ ಸ್ಟೋರಿ ಬಗ್ಗೆ ಕುತೂಹಲವಿದ್ರೆ ಮುಂದೆ ಓದಿ……
ಹೌದು, 95 ವರ್ಷದ ವ್ಯಕ್ತಿಯೊಬ್ಬರು ತನ್ನ ವೃದ್ಧಾಪ್ಯದಲ್ಲಿ ಕನಸಿನ ಕನ್ಯೆಯನ್ನು ಕಂಡುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಮ್ಮ ನಿಜವಾದ ಪ್ರೀತಿಯನ್ನು ಪಡೆದುಕೊಂಡಿದ್ದಾರೆ. ಜೂಲಿಯನ್ ಮೊಯ್ಲ್ ಎಂಬ ವ್ಯಕ್ತಿ ತನ್ನ ಪತ್ನಿ ವ್ಯಾಲೆರಿ ವಿಲಿಯಮ್ಸ್ (84) ಅವರನ್ನು 23 ವರ್ಷಗಳ ಹಿಂದೆ ಯುಕೆ ಕಾರ್ಡಿಫ್ನಲ್ಲಿರುವ ಚರ್ಚ್ನಲ್ಲಿ ಭೇಟಿಯಾಗಿದ್ದರು. ಆದರೆ, ಈ ವೇಳೆ ಅವರು ತಾವು ಗಂಡ-ಹೆಂಡತಿ ಆಗುತ್ತೇವೆ ಎಂದು ಊಹಿಸಿರಲಿಲ್ಲ.
ಜೂಲಿಯನ್ ಮೊಯ್ಲ್ ಫೆಬ್ರವರಿಯಲ್ಲಿ ವ್ಯಾಲೆರಿ ವಿಲಿಯಮ್ಸ್ಗೆ ವಿವಾಹ ಪ್ರಸ್ತಾಪ ಮಾಡಿದ್ದಾರೆ. ಇಬ್ಬರೂ ಮೇ 19 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಆಸಕ್ತಿಯ ಸಂಗತಿಯೆಂದರೆ, ಅವರು ಮೊದಲು ಭೇಟಿಯಾಗಿದ ಚರ್ಚ್ನಲ್ಲೇ ವಿವಾಹವಾಗಿದ್ದಾರೆ. ಸಮಾರಂಭವನ್ನು ಕ್ಯಾಲ್ವರಿ ಬ್ಯಾಪ್ಟಿಸ್ಟ್ ಚರ್ಚ್ನಲ್ಲಿ ಏರ್ಪಡಿಸಲಾಗಿತ್ತು. ಈ ಮದುವೆ ಕಾರ್ಯಕ್ರಮದಲ್ಲಿ ಸುಮಾರು 40 ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹಾಜರಿದ್ದರು.
ನವಜೋಡಿಯು, ಜೂಲಿಯನ್ ಅವರ ತಾಯ್ನಾಡು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದ್ದಾರಂತೆ. ಹಾಗೆಯೇ ಈ ವರ್ಷದ ಕೊನೆಯಲ್ಲಿ ಅವರು ತಮ್ಮ ಮಧುಚಂದ್ರವನ್ನು ಸಹ ಆಚರಿಸಲಿದ್ದಾರೆ. ಅಂದಹಾಗೆ, ಜೂಲಿಯನ್ 1954 ರಲ್ಲಿ ಆಸ್ಟ್ರೇಲಿಯಾದಿಂದ ಯುಕೆಗೆ ವಲಸೆ ಬಂದಿದ್ದರು.