alex Certify ನಿಜವಾಗಿದೆ 2022 ರ ಬಗ್ಗೆ ಕುರುಡು ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿ, ಅಷ್ಟಕ್ಕೂ ಆಕೆ ಹೇಳಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಜವಾಗಿದೆ 2022 ರ ಬಗ್ಗೆ ಕುರುಡು ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿ, ಅಷ್ಟಕ್ಕೂ ಆಕೆ ಹೇಳಿದ್ದೇನು ಗೊತ್ತಾ….?  

ಬಲ್ಗೇರಿಯಾದ ಕುರುಡು ಬಾಬಾ ವಂಗಾ ಸಾವನ್ನಪ್ಪಿ ವರ್ಷಗಳೇ ಕಳೆದಿದೆ. ಆದ್ರೆ ಆಕೆಯ ಭವಿಷ್ಯವಾಣಿಗಳು ಇಂದಿಗೂ ನಿಜವಾಗುತ್ತಿವೆ. ಬಾಬಾ ವಂಗಾಳಲ್ಲಿ ಅತೀಂದ್ರಿಯ ಶಕ್ತಿ ಇದೆ ಅನ್ನೋದು ನಂಬಿಕೆ. ಕೆಲವೊಂದು ಜಾಗತಿಕ ಘಟನೆಗಳು ಸಂಭವಿಸುವ ಮುನ್ನವೇ ಆಕೆ ಅದರ ಮುನ್ಸೂಚನೆಗಳನ್ನು ನೀಡಿದ್ದರು.

ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೂ ಕರೆಯಲ್ಪಡುವ ಬಾಬಾ ವಂಗಾ, 9/11 ಭಯೋತ್ಪಾದಕ ದಾಳಿ, 2017ರ ಬ್ರೆಕ್ಸಿಟ್, ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು, ಸೋವಿಯತ್ ವಿಸರ್ಜನೆಯನ್ನು ಒಳಗೊಂಡಂತೆ ಅನೇಕ ಪ್ರಮುಖ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ನೀಡಿದ್ದರು.

2004 ರಲ್ಲಿ ಸಂಭವಿಸಿದ ಥೈಲ್ಯಾಂಡ್ ಸುನಾಮಿ ಮತ್ತು ಬರಾಕ್ ಒಬಾಮಾ ಅವರ ಅಧ್ಯಕ್ಷತೆ ಬಗ್ಗೆ ಆಕೆ ನುಡಿದಿದ್ದ ಭವಿಷ್ಯ ಶೇ.85ರಷ್ಟು ನಿಜವೇ ಆಗಿತ್ತು. ಬಾಬಾ ವಂಗಾ ಅವರು 12 ವರ್ಷದವಳಿದ್ದಾಗ ನಿಗೂಢವಾಗಿ ದೃಷ್ಟಿ ಕಳೆದುಕೊಂಡರು. ಭವಿಷ್ಯವನ್ನು ನೋಡಲು ಇದು ದೇವರು ತನಗೆ ಕೊಟ್ಟ ಉಡುಗೊರೆ ಎಂದೇ ಆಕೆ ಹೇಳಿಕೊಂಡಿದ್ದರು. 1996 ರಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಾಬಾ ವಂಗಾ ಸಾವನ್ನಪ್ಪಿದ್ದಾರೆ. ಆದ್ರೆ ಆಕೆಯ ಶಿಷ್ಯರು ಹೇಳುವ ಪ್ರಕಾರ 5079 ರವರೆಗೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರಂತೆ.

5079ರಲ್ಲಿ ಪ್ರಪಂಚ ಕೊನೆಗೊಳ್ಳುತ್ತದೆ ಅನ್ನೋದು ಆಕೆಯ ಭವಿಷ್ಯವಾಣಿ. ನಾವೀಗ 2022ರ ಅರ್ಧದಾರಿ ಕ್ರಮಿಸಿದ್ದೇವೆ. ಅಷ್ಟರಲ್ಲಾಗಲೇ ಈ ವರ್ಷ ಬಾಬಾ ವಂಗಾ ನುಡಿದಿರೋ 6 ಭವಿಷ್ಯವಾಣಿಗಳ ಪೈಕಿ ಎರಡು ನಿಜವಾಗಿವೆ. ಈ ವರ್ಷ ಹಲವಾರು ಏಷ್ಯನ್ ದೇಶಗಳು ಮತ್ತು ಆಸ್ಟ್ರೇಲಿಯಾಕ್ಕೆ ‘ಪ್ರವಾಹದ ತೀವ್ರ ಹೊಡೆತ ತಟ್ಟಲಿದೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಖರವಾಗಿ ಸಂಭವಿಸಿದೆ. ಈ ವರ್ಷದ ಫೆಬ್ರವರಿ ಮತ್ತು ಏಪ್ರಿಲ್ ನಡುವೆ ದಾಖಲಾದ ಅತ್ಯಂತ ಭೀಕರವಾದ ಪ್ರವಾಹ ವಿಪತ್ತನ್ನ ಆಸ್ಟ್ರೇಲಿಯಾ ಎದುರಿಸಿದೆ.

ಆಗ್ನೇಯ ಕ್ವೀನ್ಸ್‌ಲ್ಯಾಂಡ್‌ನ ಕೆಲವು ಭಾಗಗಳು, ವೈಡ್ ಬೇ-ಬರ್ನೆಟ್ ಮತ್ತು ನ್ಯೂ ಸೌತ್ ವೇಲ್ಸ್, ಬ್ರಿಸ್ಬೇನ್ ಸೇರಿದಂತೆ ಹಲವಾರು ನಗರಗಳು ಪ್ರವಾಹದಿಂದ ಮುಳುಗಿದ್ದವು. ಬರಗಾಲದ ಪರಿಣಾಮವಾಗಿ ನಗರಗಳು ನೀರಿನ ಕೊರತೆಯಿಂದ ಬಳಲುತ್ತವೆ ಎಂದು ಬಾಬಾ ವಂಗಾ ಹೇಳಿದ್ದರು. ಪ್ರಸ್ತುತ ಯುರೋಪ್‌ ಇದೇ ಸ್ಥಿತಿಯನ್ನು ಎದುರಿಸುತ್ತಿದೆ. ನೀರಿನ ಬಳಕೆಯನ್ನು ಕಡಿಮೆ ಮಾಡುವಂತೆ ಪೋರ್ಚುಗಲ್‌ ತನ್ನ ನಾಗರಿಕರನ್ನು ಕೇಳಿಕೊಂಡಿದೆ. ಯಾಕಂದ್ರೆ ಇಟಲಿ 1950ರ ದಶಕದ ನಂತರ ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿದೆ.

ಬಾಬಾ ವಂಗಾರ ಇತರ ಭವಿಷ್ಯವಾಣಿಗಳೇನು?

ಈ ವರ್ಷ ಸೈಬೀರಿಯಾದಿಂದ ಹೊಸ ಮಾರಣಾಂತಿಕ ವೈರಸ್ ದಾಳಿ, ಅನ್ಯಲೋಕದ ಆಕ್ರಮಣ, ಭಾರತದಲ್ಲಿ ಮಿಡತೆ ದಾಳಿ ಮತ್ತು ವರ್ಚುವಲ್ ರಿಯಾಲಿಟಿ ಬಳಕೆಯಲ್ಲಿ ಏರಿಕೆಯಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದಲ್ಲದೆ 2023 ರಲ್ಲಿ ಭೂಮಿಯ ಕಕ್ಷೆಯು ಬದಲಾಗುತ್ತದೆ ಮತ್ತು 2028ರಲ್ಲಿ ಗಗನಯಾತ್ರಿಗಳು ಶುಕ್ರಕ್ಕೆ ಪ್ರಯಾಣಿಸಲಿದ್ದಾರೆ ಎಂಬುದು ಆಕೆಯ ಭವಿಷ್ಯವಾಣಿ.

2046ರಲ್ಲಿ ಅಂಗಾಂಗ ಕಸಿ ತಂತ್ರಜ್ಞಾನದಿಂದಾಗಿ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದೂ ಆಕೆ ಹೇಳಿದ್ದಾರೆ. 2100 ರಲ್ಲಿ ರಾತ್ರಿಯು ಕಣ್ಮರೆಯಾಗುತ್ತದೆ ಮತ್ತು ಕೃತಕ ಸೂರ್ಯನ ಬೆಳಕು ಭೂಮಿಯ ಇನ್ನೊಂದು ಭಾಗವನ್ನು ಬೆಳಗಿಸುತ್ತದೆ ಎಂದು ಆಕೆ ಭವಿಷ್ಯ ನುಡಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...