alex Certify ನಿಗೂಢವಾಗಿ ನಾಪತ್ತೆಯಾಗಿದ್ದಾಳೆ ಜನಪ್ರಿಯ ಯುಟ್ಯೂಬರ್‌; ಕುಟುಂಬಸ್ಥರಿಂದ ದೂರು ದಾಖಲು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಗೂಢವಾಗಿ ನಾಪತ್ತೆಯಾಗಿದ್ದಾಳೆ ಜನಪ್ರಿಯ ಯುಟ್ಯೂಬರ್‌; ಕುಟುಂಬಸ್ಥರಿಂದ ದೂರು ದಾಖಲು….!

ಬಿಂದಾಸ್‌ ಕಾವ್ಯ ಎಂದೇ ಜನಪ್ರಿಯಳಾಗಿದ್ದ ಯುಟ್ಯೂಬರ್‌, ಟಿಕ್‌ಟಾಕ್‌ ಸೆಲೆಬ್ರಿಟಿ ಹಾಗೂ ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಸಪ್ಟೆಂಬರ್‌9ರಂದು ಕಾವ್ಯ ನಾಪತ್ತೆಯಾಗಿದ್ದು, ಕುಟುಂಬಸ್ಥರು ಈಗಾಗ್ಲೇ ದೂರು ದಾಖಲಿಸಿದ್ದಾರೆ.

ಬಿಂದಾಸ್‌ ಕಾವ್ಯ ಯುಟ್ಯೂಬ್‌ ಚಾನೆಲ್‌ ಅನ್ನು ಹೊಂದಿದ್ದಾಳೆ. ಜೊತೆಗೆ ಟಿಕ್‌ಟಾಕ್‌ ವಿಡಿಯೋಗಳ ಮೂಲಕವೂ ಫೇಮಸ್‌ ಆಗಿದ್ದಳು. ಆಕೆಯ ಹೆಸರು ಕಾವ್ಯಶ್ರೀ ಯಾದವ್‌. 2004ರ ಮಾರ್ಚ್‌ 30ರಂದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜನಿಸಿದ್ದಾಳೆ.

ತನ್ನ 15ನೇ ವಯಸ್ಸಿನಲ್ಲಿಯೇ ಕಾವ್ಯ ಸಾಕಷ್ಟು ಜನಪ್ರಿಯತೆ ಗಳಿಸಿದ್ದಳು. 2017ರಲ್ಲಿ ಈಕೆ ಯುಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾಳೆ. ಕೇವಲ 2 ವರ್ಷಗಳಲ್ಲಿ ಸುಮಾರು 3 ಲಕ್ಷ ಚಂದಾದಾರರನ್ನು ಸಂಪಾದಿಸಿದ್ದಳು.

ಕಾವ್ಯ ಕಾಣೆಯಾಗಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ಕುಟುಂಬಸ್ಥರು ಆಕೆಯನ್ನು ಪತ್ತೆ ಮಾಡಲು ಸಹಾಯ ಮಾಡುವಂತೆ ಸಾರ್ವಜನಿಕರು ಹಾಗೂ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆಕೆಗಿನ್ನೂ 16  ವರ್ಷ, ದಯವಿಟ್ಟು ಹುಡುಕಲು ಸಹಾಯ ಮಾಡಿ, ಯಾವುದೇ ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸುವಂತೆ ಟ್ವೀಟ್‌ ಮೂಲಕ ಬೇಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...