alex Certify ನಿಂಬೆ ಪಾನಕದಿಂದ ತೂಕ ಕಡಿಮೆಯಾಗುತ್ತಾ….? ಇಲ್ಲಿದೆ ಅಸಲಿ ಪ್ರಯೋಜನದ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಂಬೆ ಪಾನಕದಿಂದ ತೂಕ ಕಡಿಮೆಯಾಗುತ್ತಾ….? ಇಲ್ಲಿದೆ ಅಸಲಿ ಪ್ರಯೋಜನದ ವಿವರ

ನಿಂಬೆ ಪಾನಕ ಬಹುತೇಕ ಎಲ್ಲರೂ ಇಷ್ಟಪಡುವ ಪಾನೀಯ. ಎಲ್ಲಾ ಕಡೆಗಳಲ್ಲೂ ಸುಲಭವಾಗಿ ಸಿಗುತ್ತದೆ. ಕೆಲವರು ಲಿಂಬು ಸೋಡಾ ಕುಡಿಯಲು ಇಚ್ಛಿಸ್ತಾರೆ. ನಿಂಬೆ ಪಾನಕ ಸೇವನೆಯಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ.

ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿಕೊಂಡು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ ಅನ್ನೋದನ್ನು ನೀವು ಕೇಳಿರಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನಿಂಬೆ ಪಾನಕವನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಕೂಡ ಸಲಹೆ ನೀಡುತ್ತಾರೆ.

ಉತ್ತಮ ಫಲಿತಾಂಶಕ್ಕಾಗಿ ಅನೇಕರು ಈ ಮಿಶ್ರಣಕ್ಕೆ ಜೇನುತುಪ್ಪವನ್ನೂ ಬೆರೆಸುತ್ತಾರೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ-6, ಪೆಕ್ಟಿನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಸ್ವತಂತ್ರ ರಾಡಿಕಲ್ಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆಂಟಿಒಕ್ಸಿಡೆಂಟ್‌ಗಳು ನಿಂಬೆಯಲ್ಲಿ ಕಂಡುಬರುತ್ತವೆ. ಇದು ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ನಿಂಬೆ ಪಾನಕವನ್ನು ಸೇವಿಸುವುದರಿಂದ ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾದ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಾಗಾಗಿ ನಿಮ್ಮ ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ. ನಿಂಬೆಯಲ್ಲಿ ಪೆಕ್ಟಿನ್ ಅಂಶವಿದೆ, ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಕುಡಿದ ನಂತರ ಕರಿದ ಪದಾರ್ಥಗಳನ್ನು ತಿನ್ನುವ ಬಯಕೆಯೂ ಕಡಿಮೆಯಾಗುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ.

ನಿಂಬೆಯಲ್ಲಿರುವ ಪೊಟ್ಯಾಸಿಯಮ್ ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಬೆರೆಸಿ. ಬ್ಲಾಕ್‌ ಸಾಲ್ಟ್‌ ಮತ್ತು ಜೀರಿಗೆ ಪುಡಿ ಸೇರಿಸಿಕೊಂಡು ಕುಡಿಯಿರಿ. ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಸೇವಿಸಿದರೆ ತೂಕ ತ್ವರಿತವಾಗಿ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...