alex Certify ನಾಳೆ ಬಿಡುಗಡೆಯಾಗಲಿದೆ ‘ಬನಾರಸ್’ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಬಿಡುಗಡೆಯಾಗಲಿದೆ ‘ಬನಾರಸ್’ ಸಿನಿಮಾ

ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜಯತೀರ್ಥ ನಿರ್ದೇಶನದ ‘ಬನಾರಸ್’ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಈಗಾಗಲೇ ರೋಡ್ ಶೋ ಮೂಲಕ ಪ್ರಚಾರ ಕಾರ್ಯವನ್ನು ಚಿತ್ರತಂಡ ಪೂರ್ಣಗೊಳಿಸಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ರೊಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಝೈದ್ ಖಾನ್ ಹಾಗೂ ಸೋನಲ್ ಮೊಂಟೈರೋ ಮುಖ್ಯಭೂಮಿಕೆಯಲ್ಲಿದ್ದು ಅಚ್ಯುತ್ ಕುಮಾರ್ ದೇವರಾಜ್ ಹಾಗೂ ಸುಜಯ್ ಶಾಸ್ತ್ರೀ ತೆರೆ ಹಂಚಿಕೊಂಡಿದ್ದಾರೆ. ಎನ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ತಿಲಕ್ ರಾಜ್ ಬಲ್ಲಾಳ್ ಹಾಗೂ ಮುಜಾಮಿಲ್ ಅಹ್ಮದ್ ಖಾನ್ ಜಂಟಿಯಾಗಿ ಈ ಸಿನಿಮಾಗೇ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...