alex Certify ನಾಳೆ ಬಿಡುಗಡೆಯಾಗಲಿದೆ ‘ಜಗವೇ ನೀನು ಗೆಳತಿಯೇ’ ವಿಡಿಯೋ ಸಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಬಿಡುಗಡೆಯಾಗಲಿದೆ ‘ಜಗವೇ ನೀನು ಗೆಳತಿಯೇ’ ವಿಡಿಯೋ ಸಾಂಗ್

ಶಶಾಂಕ್ ನಿರ್ದೇಶನದ ‘ಲವ್ 360′ ಚಿತ್ರ ಈಗಾಗಲೇ ಇಪ್ಪತ್ತೈದು ದಿನಗಳನ್ನು ಪೂರೈಸಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು,‌ ಈ ಸಿನಿಮಾದ ಜಗವೇ ನೀನು ಗೆಳತಿಯೇ’ ಹಾಡಂತೂ ಎಲ್ಲರ ಬಾಯಲ್ಲಿ ನಲಿದಾಡುತ್ತಲೇ ಇದೆ.

ಈ ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡಿದ್ದು ಇದೀಗ ವಿಡಿಯೋ ಹಾಡನ್ನು ನಾಳೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಿದ್ದಾರೆ.

ಟಾಲಿವುಡ್ ನ ಖ್ಯಾತ ಗಾಯಕ ಸಿದ್ಧ್ ಶ್ರೀರಾಮ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಹಾಗೂ ಶಶಾಂಕ್ ಸಾಹಿತ್ಯವಿದೆ.

ಶಶಾಂಕ್ ಸಿನಿಮಾಸ್ ಬ್ಯಾನರ್ ನಡಿ ಶಶಾಂಕ್ ಹಾಗೂ ಮಂಜುಳಾ ಮೂರ್ತಿ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಪ್ರವೀಣ್ ಹಾಗೂ ರಚನಾ ಇಂದರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...