ನಾಳೆ ಢಾಕಾದಲ್ಲಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಣ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ ನಡೆಯಲಿದೆ ನ್ಯೂಜಿಲೆಂಡ್ ತಂಡ ಐಸಿಸಿ ಟಿ ಟ್ವೆಂಟಿ ರ್ಯಾಂಕಿಂಗ್ ನಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಬಾಂಗ್ಲಾದೇಶ ತಂಡ 10ನೇ ಸ್ಥಾನದಲ್ಲಿದೆ. ನಾಳೆ ಮದ್ಯಾಹ್ನ 3:30ಕ್ಕೆ ಪಂದ್ಯ ಪ್ರಸಾರವಾಗಲಿದೆ.
ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್….! ಕಡಿಮೆಯಾಗ್ತಿದೆ ಉಳಿತಾಯ ಖಾತೆ ಬಡ್ಡಿ ದರ
ನಾಳೆಯಿಂದ ಸೆಪ್ಟೆಂಬರ್ 10ರವರೆಗೆ 5 ಟಿ ಟ್ವೆಂಟಿ ಪಂದ್ಯಗಳು ನಡೆಯುತ್ತಿದ್ದು ಬಾಂಗ್ಲಾದೇಶ ತಂಡದ ನಾಯಕನಾಗಿ ಮಹಮದುಲ್ಲ ಮುನ್ನಡೆಸುತ್ತಿದ್ದು ಟಾಮ್ ಲಾಥಮ್ ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದಾರೆ ನ್ಯೂಜಿಲೆಂಡ್ ತಂಡದಲ್ಲಿ ಹೊಸ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ.
ಇನ್ನು ಐಸಿಸಿ ಟಿ ಟ್ವೆಂಟಿ ರ್ಯಾಂಕಿಂಗ್ ನಲ್ಲಿ ಬಾಂಗ್ಲಾದೇಶ ತಂಡದ ಸ್ಟಾರ್ ಆಲ್ರೌಂಡರ್ ಶಕಿಬ್ ಅಲ್ ಹಸನ್ ಮೊದಲ ಸ್ಥಾನ ಕಾಯ್ದುಕೊಂಡಿದ್ದು ಬಾಂಗ್ಲಾದೇಶ ತಂಡದ ಭರವಸೆ ಹೆಚ್ಚಿಸಿದಂತಾಗಿದೆ.