alex Certify ನಾಳೆ ತೆರೆ ಮೇಲೆ ಬರಲಿದೆ ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ತೆರೆ ಮೇಲೆ ಬರಲಿದೆ ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’

ವಿಜಯ್ ಪ್ರಸಾದ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷಿತ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನ್ ಸಿನಿಮಾ ‘ತೋತಾಪುರಿ’ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಸಿನಿಮಾ ಈಗಾಗಲೇ ‘ಬಾಗ್ಲು ತೆಗಿ ಮೆರಿ ಜಾನ್’ ಎಂಬ ಹಾಡಿನಿಂದಲೇ ಗಾನ ಪ್ರಿಯರ ಗಮನ ಸೆಳೆದಿದೆ.

ಈ ಚಿತ್ರ 2ಭಾಗಗಳಲ್ಲಿ ಮೂಡಿಬರಲಿದೆ ಎಂದು ನಿರ್ದೇಶಕ ವಿಜಯ್ ಪ್ರಸಾದ್ ಈಗಾಗಲೇ ಸುದ್ದಿವಾಹಿನಿಯಲ್ಲಿ ತಿಳಿಸಿದ್ದು, ನಾಳೆ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮೊದಲನೇ ಭಾಗ  ತೆರೆಕಾಣಲಿದೆ.

ಕೆ ಎ ಸುರೇಶ್ ನಿರ್ಮಾಣದ ಈ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ್ ಅಭಿನಯಿಸಿದ್ದು, ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...