
ವಿಜಯ್ ಪ್ರಸಾದ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷಿತ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನ್ ಸಿನಿಮಾ ‘ತೋತಾಪುರಿ’ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಸಿನಿಮಾ ಈಗಾಗಲೇ ‘ಬಾಗ್ಲು ತೆಗಿ ಮೆರಿ ಜಾನ್’ ಎಂಬ ಹಾಡಿನಿಂದಲೇ ಗಾನ ಪ್ರಿಯರ ಗಮನ ಸೆಳೆದಿದೆ.
ಈ ಚಿತ್ರ 2ಭಾಗಗಳಲ್ಲಿ ಮೂಡಿಬರಲಿದೆ ಎಂದು ನಿರ್ದೇಶಕ ವಿಜಯ್ ಪ್ರಸಾದ್ ಈಗಾಗಲೇ ಸುದ್ದಿವಾಹಿನಿಯಲ್ಲಿ ತಿಳಿಸಿದ್ದು, ನಾಳೆ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮೊದಲನೇ ಭಾಗ ತೆರೆಕಾಣಲಿದೆ.
ಕೆ ಎ ಸುರೇಶ್ ನಿರ್ಮಾಣದ ಈ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ್ ಅಭಿನಯಿಸಿದ್ದು, ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.