alex Certify ನಾಳೆ ‘ಅಬ್ಬರ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ‘ಅಬ್ಬರ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಆಗಸ್ಟ್ 12ರಂದು ತೆರೆಯ ಮೇಲೆ ಬರಲು ಸಜ್ಜಾಗಿರುವ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ‘ಅಬ್ಬರ’ ಚಿತ್ರದ ‘ಓ ಸುಕುಮಾರಿಯೇ’ ಎಂಬ  ವಿಡಿಯೋ ಹಾಡೊಂದನ್ನು ನಾಳೆ 10:05ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ವ್ಯಾಸರಾಜ್ ಹಾಗೂ ನೀತು ಸುಬ್ರಹ್ಮಣ್ಯಂ ಈ ಹಾಡಿಗೆ ಧ್ವನಿಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಟೀಸರ್ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರವನ್ನು ಕೆ. ರಾಮನಾರಾಯಣ್ ನಿರ್ದೇಶಿಸಿದ್ದು, ಸಿ ಆಂಡ್ ಎಂ ಮೂವೀಸ್ ಬ್ಯಾನರ್ ನಡಿ ಬಸವರಾಜ್ ಮಂಚಯ್ಯ ನಿರ್ಮಾಣ ಮಾಡಿದ್ದಾರೆ.

ಪ್ರಜ್ವಲ್ ಗೆ ಜೋಡಿಯಾಗಿ ರಾಜಶ್ರೀ ಪೊನ್ನಪ್ಪ  ಅಭಿನಯಿಸಿದ್ದು ನಿಮಿಕ ರತ್ನಾಕರ್, ಲೇಖ ಚಂದ್ರ, ಹಾಗೂ ರವಿಶಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...