
ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವಾದ್ಯಂತ ಮಹಿಳಾ ದಿನವನ್ನ ಆಚರಣೆ ಮಾಡಲಾಗುತ್ತೆ. ಈ ದಿನದಂದು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನ ಸ್ಮರಿಸಲಾಗುತ್ತೆ. ಮಹಿಳೆಯ ಅಭಿವೃದ್ಧಿ ಹಾಗೂ ಸಮಾನತೆಗಾಗಿ ವಿಶ್ವದಾದ್ಯಂತ ಈ ದಿನವನ್ನ ಆಚರಣೆ ಮಾಡಲಾಗುತ್ತೆ.
ಪ್ರತಿ ವರ್ಷ ಮಹಿಳಾ ದಿನವನ್ನ ಒಂದೊಂದು ವಿಶೇಷ ಅರ್ಥವನ್ನ ಇಟ್ಟುಕೊಂಡು ಆಚರಣೆ ಮಾಡಲಾಗುತ್ತೆ.
ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶತಮಾನಗಳ ಇತಿಹಾಸವೇ ಇದೆ. 1857ರ ಮಾರ್ಚ್ 8ರಂದು ನ್ಯೂಯಾರ್ಕ್ನಲ್ಲಿ ನಡೆದಿದ್ದ ಗಾರ್ಮೆಂಟ್ನ ಮಹಿಳಾ ಕಾರ್ಮಿಕರು ನಡೆಸಿದ್ದ ಪ್ರತಿಭಟನೆ ಸ್ಮರಣಾರ್ಥ 1909 ಫೆಬ್ರವರಿ 28ರಂದು ನ್ಯೂಯಾರ್ಕ್ ಮೊಟ್ಟ ಮೊದಲ ಮಹಿಳಾ ದಿನವನ್ನ ಆಚರಣೆ ಮಾಡಿದೆ. ಇದಾದ ಬಳಿಕ 1910ರಲ್ಲಿ ಡೆನ್ಮಾರ್ಕ್ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ವಕೀಲೆ ಕ್ಲಾರಾ ಜಟ್ಕಿನ್ ಎಂಬಾಕೆ ಮಾರ್ಚ್ 8ರಂದು ಮಹಿಳಾ ದಿನ ಆಚರಿಸುವಂತೆ ಬೇಡಿಕೆ ಇಟ್ಟರು. ಇದಕ್ಕೆ ವಿಶ್ವದ ಎಲ್ಲಾ ರಾಷ್ಟ್ರಗಳ ಒಪ್ಪಿಗೆ ಕೂಡ ದಕ್ಕಿತು.
ಅಂದಿನಿಂದ ಮಹಿಳೆಯ ಅಭಿವೃದ್ಧಿ, ಶೋಷಣೆಯ ವಿರುದ್ಧ ಹೋರಾಟ, ಲಿಂಗ ಸಮಾನತೆಯ ಉದ್ದೇಶದಿಂದ ಮಹಿಳಾ ದಿನವನ್ನ ಆಚರಣೆ ಮಾಡಲಾಗ್ತಿದೆ.